ಮಡಿಕೇರಿ, ಡಿ. ೨೧: ನಗರದ ಬೀದಿಬೀದಿಗಳಿಗೆ ಬೆಳಂಬೆಳಿಗ್ಗೆ ಜೋರಾದ ಝೇಂಕಾರದೊAದಿಗೆ, ‘ವಿಲೇವಾರಿ, ಎಲ್ಲಾ ವಿಲೇವಾರಿ’ ಎಂಬ ಟ್ರಾö್ಯಕ್ಟರ್‌ನ ಗೀತೆಗಳ ಜಾಗೃತಿಯ ನಡುವೆಯೂ ನಗರದ ಬಹಳಷ್ಟು ಬೇಜವಾಬ್ದಾರಿಯುತ ನಾಗರಿಕರು ಎಲ್ಲೆಂದರಲ್ಲಿ ಕಸ ಎಸೆಯುವ ಸಾಹಸಮಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಚಳಿಗಾಲದಲ್ಲಿ ಬೆಳ್ಳಂಬೆಳಿಗ್ಗೆ ಬೇಗನೆ ಎದ್ದು, ಮೈ ಬಿಸಿ ಮಾಡುವ ನಿಟ್ಟಿನಲ್ಲಿ ಹಾಗೂ ಆರೋಗ್ಯಕg Àವಾಗಿರಲು ವ್ಯಾಯಾಮ, ವಾಕಿಂಗ್, ಜಾಗಿಂಗ್ ಮಾಡುವ ಬಹಳಷ್ಟು ಮಂದಿಯ ನಡುವೆ, ಪ್ಲಾಸ್ಟಿಕ್ ಕವರ್‌ಗಳಲ್ಲಿ ತುಂಬಿದ ಕಸವನ್ನು ಗುಪ್ತವಾಗಿ ರಸ್ತೆ ಬದಿಗಳಲ್ಲಿ ಬೆಳಗ್ಗೆಯೇ ಎಸೆಯುವ ಕಾರ್ಯದಲ್ಲಿ ಹಲವರು ತೊಡಗಿದ್ದಾರೆ. ಮತ್ತೆ ಕೆಲವರು ಮಧ್ಯಾಹ್ನದ ನಡುಬಿಸಿಲಿನಲ್ಲಿ ವಾಹನಗಳ ಓಡಾಟದ ನಡುವೆಯೂ ಧೈರ್ಯ ಮಾಡಿ ಕಸವನ್ನು ಸೂಕ್ಷö್ಮವಾಗಿ ರಸ್ತೆಬದಿಯಲ್ಲಿ ಇರಿಸಿ ಏನೂ ತಿಳಿಯದ ಹಾಗೆ ಹೋಗುತ್ತಾರೆ. ಇನ್ನು ಹಲವರು ರಾತ್ರೋರಾತ್ರಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.

ನಿನ್ನೆ ಹಗಲು ಸುಮಾರು ೧೧ ಗಂಟೆಗೆ ನಗರದ ಗಣಪತಿ ಬೀದಿಯಲ್ಲಿರುವ

(ಮೊದಲ ಪುಟದಿಂದ) ಕಾಂಗ್ರೆಸ್ ಕಚೇರಿಯಲ್ಲಿ ಸಂಗ್ರಹವಾದ ಕಸವನ್ನು ಮಹಿಳೆಯೋರ್ವರು, ರಸ್ತೆ ಬದಿ ಇರಿಸಿ ಏನೂ ತಿಳಿಯದ ಹಾಗೆ ಜಾಗ ಖಾಲಿ ಮಾಡಿದ್ದಾರೆ.

ನಿನ್ನೆ ಸಂಜೆ ಮೈತ್ರಿ ಹಾಲ್ ಬಳಿಯ ಪೊಲೀಸ್ ಕ್ವಾಟರ‍್ಸ್ ಬಳಿ ಖಾಕಿ ಪಡೆಯವರೊಬ್ಬರು ಬೈಕ್‌ಅನ್ನು ಚಲಾಯಿಸುತ್ತಿದ್ದಾಗಲೇ ಒಂದು ಕೈಯಲ್ಲಿದ್ದ ಕಸದ ಚೀಲವನ್ನು ರಸ್ತೆ ಬದಿ ಸಾಹಸಮಯವಾಗಿ ಎಸೆದು ಪರಾರಿಯಾಗಿದ್ದಾರೆ.

ಮತ್ತೋರ್ವರು ಗಾಳಿಬೀಡಿನಿಂದ ಆಗಮಿಸಿ ನಗರದ ಕಾನ್ವೆಂಟ್ ಜಂಕ್ಷನ್ ಬಳಿ ಕಸ ಎಸೆಯುವ ಹವ್ಯಾಸದಲ್ಲಿ ಪ್ರತಿದಿನ ತೊಡಗಿಸಿಕೊಂಡಿದ್ದರು. ಆದರೆ ಇದೀಗ ಇವರೆಲ್ಲರು ಸೇರಿದಂತೆ ಇನ್ನೂ ಬಹಳಷ್ಟು ಮಂದಿ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅವರುಗಳನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಕಾರ್ಯದಲ್ಲಿ ನಗರಸಭೆ ಚುರುಕಾಗಿದೆ.

ನಗರಸಭೆಯ ನೂತನ ಅಧ್ಯಕ್ಷೆ ಅನಿತಾ ಪೂವಯ್ಯ ಅವರ ಪ್ರಯತ್ನದಿಂದಾಗಿ ನಗರದ ಸುಮಾರು ೧೨ ಕಡೆಗಳಲ್ಲಿ ಸಿ.ಸಿ ಟಿವಿ ಕಣ್ಗಾವಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ಯಾಮರಾಗಳ ಅಳವಡಿಕೆಯಾಗಲಿವೆ. ಮೊದಲಿಗೆ ವಾರ್ಡ್ ೨ರ ಸದಸ್ಯ ಮಹೇಶ್ ಜೈನಿ ಅವರು ಕಾನ್ವೆಂಟ್ ಬಳಿ ಸಿ.ಸಿ ಟಿವಿ ಅಳವಡಿಸಿದ್ದು, ಮೊದಲನೆಯದಾಗಿ ಈ ವಾರ್ಡ್ನಲ್ಲಿ ತ್ಯಾಜ್ಯ ಸುರಿದವರಿಗೆ ರೂ.೧,೦೦೦ ದಂಡ ವಿಧಿಸಲಾಯಿತು. ತದನಂತರ ನಗರದ ಇತರೆಡೆಗಳಲ್ಲೂ ಕ್ಯಾಮರಾ ಅಳವಡಿಕೆಯ ಬಳಿಕ ನವೆಂಬರ್ ತಿಂಗಳಿನಲ್ಲಿ ರೂ.೨೬,೦೦೦ ದಂಡ ಸಂಗ್ರಹವಾಗಿದ್ದು, ಡಿಸೆಂಬರ್‌ನಲ್ಲಿ ರೂ.೨,೦೦೦ ಸೇರಿ ಒಟ್ಟು ರೂ.೨೮,೦೦೦ ದಷ್ಟು ದಂಡವನ್ನು ನಗರಸಭೆ ವತಿಯಿಂದ ಸಂಗ್ರಹಿಸಲಾಗಿದೆ. -ಪ್ರಜ್ವಲ್