ಪೊನ್ನAಪೇಟೆ/ ಗೋಣಿಕೊಪ್ಪ ವರದಿ, ಡಿ. ೨೧ : ಬೀಟೆ ಮರದ ನಾಟಾ ಸಾಗಿಸುತ್ತಿದ್ದಾಗ ದಾಳಿ ನಡೆಸಿರುವ ತಿತಿಮತಿ ಅರಣ್ಯ ವಲಯ ಕಾರ್ಯಾಚರಣೆ ತಂಡವು ಸುಮಾರು ೧೫ ಲಕ್ಷ ಮೌಲ್ಯದ ಮಾಲು ವಶ ಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದೆ. ೫ ಆರೋಪಿಗಳು ತಲೆಮರೆಸಿ ಕೊಂಡಿದ್ದಾರೆ.

ಸೋಮವಾರ ರಾತ್ರಿ ಹೆಬ್ಬಾಲೆ ಗ್ರಾಮದ ಭದ್ರಗೋಳ ಜಂಕ್ಷನ್‌ನಲ್ಲಿ ದಾಳಿ ನಡೆಸಿದ್ದು, ೧ ಸ್ವರಾಜ್ ಮಜ್ದಾ ಲಾರಿ, ೧ ಜೀಪು ಸೇರಿದಂತೆ ಬೀಟೆ ಮರದ ೧೯ ನಾಟಾಗಳನ್ನು ವಶಪಡಿಸಿಕೊಂಡಿದೆ. ಚೀನಿವಾಡ ಗ್ರಾಮದ ಎಂ. ಎಂ. ಶಹಿರಾ (೩೩), ಚೆನ್ನಯ್ಯನಕೋಟೆ ಗ್ರಾಮದ ಎಚ್. ಆರ್. ರಘು (೪೮) ಬಂಧಿತರು. ಉಳಿದಂತೆ ಆರೋಪಿಗಳಾದ ಚೀನಿವಾಡ ಗ್ರಾಮದ

ಕೆ.ಟಿ. ಶಿಯಾಬುದ್ದೀನ್ (೩೪), ನೊಕ್ಯ ಗ್ರಾಮದ ದೇವಯ್ಯ (೫೭), ಧನುಗಾಲ ಗ್ರಾಮದ

(ಮೊದಲ ಪುಟದಿಂದ) ಮಲ್ಲೇಶ್‌ಕುಮಾರ್ (೫೫), ಭದ್ರಗೋಳ ಗ್ರಾಮದ ಹರೀಶ್ (೪೦) ಕೂಡಿಗೆ ಗ್ರಾಮದ ಸಲೀಂ (೪೫) ತಲೆ ಮರೆಸಿಕೊಂಡಿದ್ದಾರೆ. ಬಂಧಿತರನ್ನು ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ವೀರಾಜಪೇಟೆ ಡಿಸಿಎಫ್ ಚಕ್ರಪಾಣಿ ಮಾರ್ಗದರ್ಶನದಲ್ಲಿ ತಿತಿಮತಿ ಎಸಿಎಫ್ ಉತ್ತಪ್ಪ, ಆರ್‌ಎಫ್‌ಒ ಅಶೋಕ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.