ಸೋಮವಾರಪೇಟೆ, ಡಿ. ೧೯: ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘವು ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ವಾರ್ಷಿಕ ಮಹಾಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ತಾಲೂಕು ಒಕ್ಕಲಿಗರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಅವರ ಅಧ್ಯಕ್ಷತೆಯಲಿ,್ಲ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು.

ಸಂಘದ ಅಭಿವೃದ್ಧಿ ಹಾಗೂ ಪ್ರಸಕ್ತ ವರ್ಷ ಸುವರ್ಣ ಮಹೋತ್ಸವ ಆಚರಿಸುವ ಬಗ್ಗೆ ಚರ್ಚೆ ನಡೆದು, ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಹಾಗೂ ಸಂಘದ ಅಭಿವೃದ್ಧಿಗೆ ಶ್ರಮಿಸಿದ ವ್ಯಕ್ತಿಗಳನ್ನು ಗುರುತಿಸಬೇಕು ಎಂದು ಸಭೆಯಲ್ಲಿ ಸಲಹೆ ನೀಡಲಾಯಿತು.

ಸಂಘದಲ್ಲಿ ಶೇ.೫೦ರಷ್ಟು ಯುವಕರಿಗೆ ಅವಕಾಶ ಕಲ್ಪಿಸಬೇಕು. ಹಿರಿಯರೊಂದಿಗೆ ಯುವಕರನ್ನೂ ಸಂಘಟಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಕೆಲವೊಂದು ಮಾರ್ಪಾಡುಗಳ ಮೂಲಕ ಬೈಲಾ ತಿದ್ದುಪಡಿಗೆ ಸಭೆ ಒಪ್ಪಿಗೆ ನೀಡಿತು.

ರಾಜ್ಯ ಒಕ್ಕಲಿಗರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ ಹರಪಳ್ಳಿ ರವೀಂದ್ರ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇದರೊಂದಿಗೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘಕ್ಕೆ ಧನ ಸಹಾಯ ಮಾಡಿದ ದಾನಿಗಳನ್ನು ಅಭಿನಂದಿಸಲಾಯಿತು.

ಸಭೆಯಲ್ಲಿ ಕಾರ್ಯದರ್ಶಿ ಎನ್.ಬಿ. ಗಣಪತಿ, ಭಾತ್ಮೀದಾರ ಕೆ.ಎಂ. ಜಗದೀಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ನಿರ್ದೇಶಕರುಗಳಾದ ಎಸ್.ಜಿ. ಮೇದಪ್ಪ, ಕೆ.ಎಸ್. ರಾಮಚಂದ್ರ, ಕೆ.ಎನ್. ಪಾಪಯ್ಯ, ಎ.ಆರ್. ಚಂಗಪ್ಪ, ಭಾರತಿ ಜೋಯಪ್ಪ, ಜಲಾ ಹೂವಯ್ಯ, ಲೋಕೇಶ್ವರಿ ಗೋಪಾಲ್, ಬಿ.ಜೆ. ದೀಪಕ್, ಎಸ್.ಬಿ. ಭರತ್‌ಕುಮಾರ್, ಎಚ್.ಪಿ. ರಾಜಪ್ಪ, ಬಗ್ಗನ ಪೊನ್ನಪ್ಪ, ಎಸ್.ಎಂ. ನಂದಕುಮಾರ್ ಉಪಸ್ಥಿತರಿದ್ದರು.