ಮಡಿಕೇರಿ, ಡಿ. ೧೯: ಹಾಕತ್ತೂರಿನ ಪ್ರೌಢಶಾಲೆಯಲ್ಲಿ ಪರಿವರ್ತನಾ ವೇದಿಕೆಯ ವತಿಯಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ತಮ್ಮ ಪೋಷಕರನ್ನೊಳಗೊಂಡು ವೃತ್ತಿ ಮಾರ್ಗದರ್ಶನ ನೀಡಲಾಯಿತು.
ಪರಿವರ್ತನಾ ವೇದಿಕೆಯ ಸಂಯೋಜಕ ಕೆ.ಎಂ. ಕುಂಞÂ ಅಬ್ದುಲ್ಲಾ ಪ್ರಾಸ್ತಾವಿಕ ಭಾಷಣ ಮಾಡಿ, ಕಾರ್ಯಾಗಾರವನ್ನು ಎಲ್ಲರೂ ಸದುಪಯೋಗಪಡಿಸಿ ಕೊಂಡು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಧನೆ ಮಾಡು ವಂತಾಗಬೇಕು. ವಿದ್ಯಾರ್ಥಿಗಳು ತಮ್ಮ ೧೬ನೇ ವಯಸ್ಸಿನಿಂದ ೨೩ ವರ್ಷಗಳಷ್ಟು ಕಾಲ ಕಠಿಣ ಶ್ರಮಗಳ ಮೂಲಕ ಉತ್ತಮ ವಿದ್ಯಾಭ್ಯಾಸವನ್ನು ಪಡೆದಲ್ಲಿ ಅವರ ಭವಿಷ್ಯವೂ ಉತ್ತಮವಾಗುವುದರೊಂದಿಗೆ ಸಮಾಜಕ್ಕೂ ತಮ್ಮ ಕೊಡುಗೆಯನ್ನು ನೀಡಬಹುದೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಸುಹಾನ್ ಭೀಮಯ್ಯ ಮಕ್ಕಳಿಗೆ ವೃತ್ತಿ ಮಾರ್ಗದರ್ಶನವನ್ನು ನೀಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವನಜಾ ಹಾಗೂ ಪರಿವರ್ತನಾ ವೇದಿಕೆಯ ಉಪ ಸಂಯೋಜಕ ಭರತ್ ಕುಮಾರ್, ಲಿಂಗರಾಜು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡಿಸಿಕೊಂಡರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಗೌರಮ್ಮ ಶಿವಪ್ಪ ಸ್ವಾಗತಿಸಿ, ಶಿಕ್ಷಕರಾದ ಭವಾನಿ ಶಂಕರ್ ವಂದಿಸಿದರು.