ಮಡಿಕೇರಿ ಡಿ.೨೦ : ಕೊಡಗು ಜಿಲ್ಲಾ ರಿಯಲ್ ಎಸ್ಟೇಟ್ ಬಿಸ್‌ನೆಸ್‌ಮೆನ್ ಅಸೋಸಿಯೇಷನ್‌ನ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆ ನಗರದಲ್ಲಿ ನಡೆಯಿತು.

ಹೊಟೇಲ್ ಮಯೂರ ವ್ಯಾಲಿವ್ಯೂನಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ತೋಲಂಡ ಸೋಮಯ್ಯ ಸಂಘ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.

ಸAಘದ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯವೆಂದ ಅವರು, ಹಲವು ಸಲಹೆ, ಸೂಚನೆಗಳನ್ನು ನೀಡಿದರು. ೨೦೨೦-೨೧ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ನು ಸಂಘದ ಜಿಲ್ಲಾ ಖಜಾಂಚಿ ಜಾನ್ಸನ್ ಪಿಂಟೋ ಮಂಡಿಸಿದರು. ಸಂಘದ ಬೆಳವಣಿಗೆಯ ಕುರಿತು ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸದಾಶಿವ ರೈ ವಿವರಿಸಿದರು. ೨೦೧೬-೧೭ನೇ ಸಾಲಿನ ವರದಿಯನ್ನು ಸಂಘದ ಮಡಿಕೇರಿಯ ಸಂಘಟನಾ ಕಾರ್ಯದರ್ಶಿ ಎನ್.ಡಿ.ಕುಶಾಲಪ್ಪ ಮಂಡಿಸಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಮುಬಿನ್ ಅಹಮ್ಮದ್, ವೀರಾಜಪೇಟೆ ತಾಲೂಕು ಸಂಘದ ಉಪಾಧ್ಯಕ್ಷರಾದ ಪಳನಿಪ್ರಕಾಶ್ ಹಾಗೂ ಅನಿಲ್, ಮಡಿಕೇರಿಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎ.ಅಬ್ದುಲ್ ಕರೀಂ, ಕೇಡನ ಬೆಳ್ಯಪ್ಪ ಉಪಸ್ಥಿತರಿದ್ದರು. ಸುಮಾರು ೩೦ ಕ್ಕೂ ಅಧಿಕ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಕಾರ್ಯದರ್ಶಿ ಕಾನೆಹಿತ್ಲು ಮೊಣ್ಣಪ್ಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.