ಕುಶಾಲನಗರ, ಡಿ. ೨೦: ಕುಶಾಲನಗರ ನೂತನ ತಾಲೂಕು ಆಡಳಿತ ಭವನ ನಿರ್ಮಿಸಲು ಜಮೀನು ಕಾಯ್ದಿರಿಸುವ ಬಗ್ಗೆ ಜಿಲ್ಲಾಧಿಕಾರಿ ಬಿ.ಸಿ. ಸತೀಶ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಕುಶಾಲನಗರ ನೂತನ ತಾಲೂಕು ಆಡಳಿತ ಭವನಕ್ಕೆ ಸ್ವಂತ ಕಟ್ಟಡ ಇಲ್ಲದಿರುವ ಕಾರಣ ಕುಶಾಲನಗರ ಹೋಬಳಿ ಗ್ರಾಮದ ಸರ್ವೆ ನಂಬರ್.೪೭/೧ ರ ೯.೮ ಎಕರೆ ಕಾವೇರಿ ನೀರಾವರಿ ನಿಗಮದ ಹೆಸರಲ್ಲಿರುವ ೧.೩೦ ಎಕರೆಯನ್ನು ನೂತನ ಭವನ ನಿರ್ಮಾಣ ಉದ್ದೇಶಕ್ಕೆ ಬಳಸಲು ಸೂಕ್ತವಾಗಿದೆ. ಆದೇಶ ನೀಡುವಂತೆ ಪತ್ರದಲ್ಲಿ ಸರಕಾರಕ್ಕೆ ಕೋರಿದ್ದಾರೆ.
ಕುಶಾಲನಗರ ತಾಲೂಕು ಆಡಳಿತ ಭವನಕ್ಕೆ ನೂತನ ಕಟ್ಟಡ ನಿರ್ಮಾಣದ ಜಾಗ ಪರಿಶೀಲನೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚುರಂಜನ್ ಮತ್ತು ಸಂಬAಧಿಸಿದ ಕಂದಾಯ ಅಧಿಕಾರಿಗಳು ಕುಶಾಲನಗರದ ವಿವಿಧೆಡೆ ಭೇಟಿ ನೀಡಿದ್ದು ಇದೀಗ ಈ ಜಾಗವನ್ನು ಆಡಳಿತ ಭವನಕ್ಕೆ ಸೂಕ್ತ ಜಾಗ ಎಂದು ಪರಿಗಣಿಸಿದ್ದಾರೆ.