ಚೆಯ್ಯಂಡಾಣೆ, ಡಿ. ೧೯: ಕೊಡಗಿನ ಉಮ್ಮತ್ ಒನ್ ಚಾರಿಟೆಬಲ್ ಟ್ರಸ್ಟ್ ಹಾಗೂ ಕೊಟ್ಟಮುಡಿ ಜಮಾಅತ್ ಆಶ್ರಯದಲ್ಲಿ ಮಂಗಳೂರಿನ ಯೇನಪೊಯ ಮೆಡಿಕಲ್ ಕಾಲೇಜ್ ಹಾಗೂ ಬೆಂಗಳೂರಿನ ರೆಡ್ ಕ್ರಾಸ್ ಸೊಸೈಟಿ ಸಹಭಾಗಿತ್ವದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಕೋವಿಡ್ ಲಸಿಕಾ ಶಿಬಿರ, ಆಯುಷ್ಮಾನ್ ಕಾರ್ಡ್, ಯೆನಪೋಯ ಆರೋಗ್ಯ ಕಾರ್ಡ್ಗಳ ವಿತರಣಾ ಕಾರ್ಯಕ್ರಮ ನಡೆಯಿತು.

ಕೊಟ್ಟಮುಡಿಯ ಮರ್ಕಝಲ್ ಹಿದಾಯ ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ೫೫೦ ಮಂದಿ ಫಲಾನುಭವಿಗಳು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕ್ಯಾನ್ಸರ್ ಸರ್ಜನ್ ಡಾ. ಅಂಜುಮ್ ಇಫ್ತಿಕಾರ್ ಸೇರಿದಂತೆ ಜನರಲ್ ಮೆಡಿಷÀನ್, ಮಕ್ಕಳ ತಜ್ಞರು, ಸ್ತಿçÃರೋಗ ತಜ್ಞರು, ಹೆರಿಗೆ ತಜ್ಞರು, ಕಣ್ಣಿನ ತಜ್ಞರು, ಚರ್ಮ ರೋಗ ತಜ್ಞರು, ಮೂತ್ರ ಪಿಂಡ ರೋಗ ತಜ್ಞರು ಉಚಿತ ಸೇವೆ ನೀಡಿದರು. ರಕ್ತದೊತ್ತಡ, ಇಸಿಜಿ, ಮಧುಮೇಹ ತಪಾಸಣೆ ಕೂಡ ಏರ್ಪಡಿಸಲಾಗಿತ್ತು.