ಸೋಮವಾರಪೇಟೆ, ಡಿ. ೨೦: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ರೂ.೧.೨೫ ಕೋಟಿ ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣಗೊಂಡಿದ್ದರೂ ಸಹ ರಸ್ತೆ ಬದಿಯ ವ್ಯಾಪಾರ ವಹಿವಾಟಿಗೆ ತಡೆಬಿದ್ದಿಲ್ಲ. ಸಂತೆ ದಿನದಂದು ಸಿ.ಕೆ. ಸುಬ್ಬಯ್ಯ ರಸ್ತೆ ಕಿಷ್ಕಿಂಧೆಯಾಗು ತ್ತಿದ್ದರೂ ಪಟ್ಟಣ ಪಂಚಾಯಿತಿ ಮಾತ್ರ ಮೌನಕ್ಕೆ ಶರಣಾಗಿದೆ.

ಮುಖ್ಯಮಂತ್ರಿಗಳ ಮಧ್ಯಮ ಮತ್ತು ಸಣ್ಣ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಕಳೆದ ೨೦೧೨ರಂದು ರೂ. ೧.೨೫ ಕೋಟಿ ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸಲಾಗಿದ್ದು, ವಿಶಾಲ ಪ್ರಾಂಗಣವನ್ನು ಒಳಗೊಂಡಿದೆ.

ಗ್ರಾಮೀಣ ಪ್ರದೇಶದಿಂದ ಹಲವಷ್ಟು ಮಂದಿ ರೈತರು, ಸುತ್ತಮುತ್ತಲ ತಾಲೂಕು, ಜಿಲ್ಲೆಗಳಿಂದ ವರ್ತಕರು ಆಗಮಿಸಿ ವ್ಯಾಪಾರದಲ್ಲಿ ತೊಡಗುತ್ತಿದ್ದು, ಉತ್ತರ ಕೊಡಗಿನ ಮಟ್ಟಿಗೆ ಅತೀ ದೊಡ್ಡ ಮಾರುಕಟ್ಟೆ ಎಂಬ ಖ್ಯಾತಿಯಿದೆ.

ಹೈಟೆಕ್ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ, ದಿನಸಿ, ಬಟ್ಟೆ, ಹಣ್ಣು-ಹಂಪಲು ಸೇರಿದಂತೆ ದಿನೋಪಯೋಗಿ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಮಾಂಸ, ಮೀನು ಮಾರುಕಟ್ಟೆ ಕೂಡ ಈ ಮಾರುಕಟ್ಟೆಗೆ ಹೊಂದಿಕೊAಡಿರುವುದರಿAದ, ಗ್ರಾಹಕರಿಗೆ ಒಂದೆ ಕಡೆ ಎಲ್ಲಾ ವಸ್ತುಗಳನ್ನು ಖರೀದಿಸುವ ಅವಕಾಶ ಇದೆ.

ಹೈಟೆಕ್ ಮಾರುಕಟ್ಟೆಯಲ್ಲಿ ಇಷ್ಟೆಲ್ಲಾ ವ್ಯವಸ್ಥೆಗಳಿದ್ದರೂ ಸಹ ರಸ್ತೆ ಬದಿಯ ವ್ಯಾಪಾರ ಮಾತ್ರ ನಿಂತಿಲ್ಲ. ಇಲ್ಲಿನ ಸಿ.ಕೆ. ಸುಬ್ಯಯ್ಯ ರಸ್ತೆ, ಕ್ಲಬ್‌ರಸ್ತೆಯ ಕೆಲವು ಸ್ಥಳಗಳಲ್ಲಿ ಸಂತೆ ದಿನವಾದ ಸೋಮವಾರದಂದು ಅಂಗಡಿಗಳನ್ನು ಹಾಕುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ಹಾಗೂ ವಾಹನಗಳ ಓಡಾಟಕ್ಕೆ ತೊಡಕಾಗಿದೆ.

ಒಂದೂಕಾಲು ಕೋಟಿ ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣವಾಗಿದ್ದರೂ ರಸ್ತೆ ಬದಿಯ ಮಾರಾಟಕ್ಕೆ ಪಟ್ಟಣ ಪಂಚಾಯಿತಿ ಅವಕಾಶ ಕಲ್ಪಿಸಿರುವುದರಿಂದ ಸೋಮವಾರದಂದು ಪಟ್ಟಣದಲ್ಲಿ ಕಿಷ್ಕಿಂಧೆಯ ವಾತಾವರಣ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ವತಿಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಹಿಂದೆ ಪ್ರಭಾರ ಅಧ್ಯಕ್ಷರಾಗಿದ್ದ ಬಿ. ಸಂಜೀವ ಅವರು ಈ ಬಗ್ಗೆ ಗಮನ ಹರಿಸಿ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಹಕಾರದಿಂದ ರಸ್ತೆ ಬದಿಯ ವ್ಯಾಪಾರ ನಿರ್ಬಂಧಿಸಿದ್ದರು.

ಇದರಿAದಾಗಿ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿ ಸಂತೆಯ ದಿನವೂ ವಾಹನ ಹಾಗೂ ಜನ ಸಂಚಾರ ಅಬಾಧಿತವಾಗಿತ್ತು. ಇದೀಗ ಮತ್ತೆ ಹಳೆಯ ಚಾಳಿ ಮುಂದುವರೆದಿದ್ದು, ರಸ್ತೆ ಬದಿಯಲ್ಲಿ ವ್ಯಾಪಾರ ನಿರಾತಂಕ ವಾಗಿದೆ. ಸೋಮವಾರದಂದು ಸರ್ಕಾರಿ ಹಾಗೂ ಖಾಸಗಿ ಬಸ್‌ಗಳೂ ಸಹ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಹಲವು ಬಾರಿ ಅವಘಡಗಳು ಸಂಭವಿಸಿತ್ತಿವೆ. ಹೀಗಿದ್ದರೂ ಪಟ್ಟಣ ಪಂಚಾಯಿತಿ ಯಾಗಲಿ, ಪೊಲೀಸ್ ಇಲಾಖೆಯಾಗಲಿ ಈ ಸಮಸ್ಯೆಯ ಬಗ್ಗೆ ಗಮನ ಹರಿಸಿದಂತೆ ಕಂಡುಬರುತ್ತಿಲ್ಲ. -ವಿಜಯ್