ಸುಂಟಿಕೊಪ್ಪ, ಡಿ. ೨೦ : ಗೌಡ ಸಂಘ ಸುಂಟಿಕೊಪ್ಪ ನಾಡು ೬ನೇ ವರ್ಷದ ವಾರ್ಷಿಕ ಮಹಾಸಭೆಯು ಗುಂಡುಗುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಯಂಕನ ಉಲ್ಲಾಸ್ ಕಳೆದ ವರ್ಷ ವಿಶ್ವಕ್ಕೆ ಕೊರೊನಾ ವ್ಯಾಪಿಸಿದ್ದರಿಂದ ಸರ್ಕಾರವು ಸಭೆ ಸಮಾರಂಭಗಳಿಗೆ ನಿರ್ಬಂದ ವಿಧಿಸಿತ್ತು ಇದರಿಂದ ವಾರ್ಷಿಕ ಮಹಾ ಸಭೆಯನ್ನು ನಡೆಸಲು ಸಾಧ್ಯವಾಗಲಿಲ್ಲ. ಸಂಘದ ಅಭಿವೃಧ್ದಿಗೆ ಜನಾಂಗದವರ ಬಾಂದವರು ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕೆಂದರು. ಮುಂದಿನ ದಿನಗಳಲ್ಲಿ ಯುವ ಸಮೂಹ ಹೆÀಚ್ಚಿನ ಆಸಕ್ತಿ ವಹಿಸಬೇಕು ಎಂದರು.

ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾದನೆ ಮಾಡಿದ ಸಂಘದ ಸದಸ್ಯರಾದ ಅಂಕಿತಾ ಸುರೇಶ್, ಮಜಗೋಡಿ ಲೀಲಾವತಿ ತಿಮ್ಮಪ್ಪ, ಪಿ.ಎಸ್.ಬೋಪಯ್ಯ, ಡಾ: ಜಮುನಾ ಜಯಕುಮಾರ್, ಪಟ್ಟೆಮನೆ ಉದಯ, ಗುಡ್ಡೆ ಮನೆ ವಿನೋದ್, ಶಂತನ ಲೋಕೇಶ್, ಕಡ್ಯದ ಪುಣ್ಯ, ಕುದುಪಜೆ ಹವ್ಯಾಸ್, ಗುಡ್ಡೆಮನೆ ಬಾಬು ದೇವಯ್ಯ, ಪೊಡನೋಲನ ತಿಲಕ್ ಕುಮಾರ್, ಕುಯ್ಯಮುಡಿ ಹೇಮಂತ್ ಕುಮಾರ್, ಅಮೆಮನೆ ಸುಬ್ಬಯ್ಯ, ಮಂದೋಡಿ ಮನೆ ಜಗನಾಥ್, ಕೋರನ ವಿಶ್ವನಾಥ್, ಕೊಳಂಬೆ ಶುಭಾಸ್, ಅರುಣ ಕುಮಾರಿ, ಮಲ್ಲನ ಸತೀಶ, ಹಾಗೂ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಾದ ಭುವನ್, ಶ್ರೇಯಾಂಕ್, ಅಭಿನಂದನ್, ಚೇvನ್, ಜಸ್ವಿನಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.

ವೇದಿಕೆಯಲ್ಲಿ ಕಾರ್ಯದರ್ಶಿ ಯಂಕನ ಕೌಶಿಕ್, ಸಹ ಕಾರ್ಯದರ್ಶಿ ಮಾಗಿಲು ವಸಂತ, ಖಜಾಂಚಿ ಪಟ್ಟೆಮನೆ ಉದಯ, ನಿರ್ದೇಶಕರಾದ ಪಟ್ಟೆಮನೆ ಕುಸುಮ, ಯಂಕನ ಕೃಪಾ ಮಟ್ರಮಾಡ ಸೋಮಯ್ಯ, ಒಡಿಯಪ್ಪನ ಸುದೀಶ, ಕಡ್ಯದ ಎನ್.ಅರುಣ್ ಕುಮಾರ್, ಕುಂಜಿಲನ ಮಂಜು,ಸುಮಿತ್ರ ಶೇಖರ್, ಬೈಚನ ಕೆ.ಮೋಹನ್, ಉಪಸ್ಥಿತರಿದ್ದರು. ಉಪಾದ್ಯಕ್ಷ ಬಿಳಿಯಾರ ಮಂಜು ಸ್ವಾಗತಿಸಿ ಪಟ್ಟೆಮನೆ ಕುಸುಮ ವಂದಿಸಿರು ಮಾಗಿಲು ವಸಂತ ವರದಿ ವಾಚಿಸಿದರು. ಓಡಿಯಪ್ಪನ ವಿಮಲಾವತಿ ನಿರೂಪಿಸಿದರು.