ಕೂಡಿಗೆ : ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜೇತರಾದ ಸುಜಾ ಕುಶಾಲಪ್ಪ ನವರು ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಭೇಟಿ ನೀಡಿದರು. ತೊರೆನೂರು, ಹೆಬ್ಬಾಲೆ, ಕೂಡಿಗೆ ಕೂಡುಮಂಗಳೂರು, ಮುಳ್ಳುಸೋಗೆ ಗ್ರಾ. ಪಂ. ವ್ಯಾಪ್ತಿಗೆ ಅವರು ಭೇಟಿ ನೀಡಿದರು. ಅಲ್ಲಿನ ಬಿಜೆಪಿ ಕಾರ್ಯಕರ್ತರು ಗ್ರಾ. ಪಂ. ಸದಸ್ಯರು ಪರಿಷತ್ ಸದಸ್ಯರನ್ನು ಸನ್ಮಾನಿಸಿ, ಗೌರವಿಸಿದರು. ಕೂಡಿಗೆ ಸರ್ಕಲ್ನಿಂದ ತೆರದ ಜೀಪ್ನ ಮೂಲಕ ಕೂಡಿಗೆ ಸರ್ಕಲ್ನಿಂದ ಕೂಡುಮಂಗಳೂರು ಗ್ರಾ.ಪಂ.ಯ ಎರಡು ಕಿಲೋಮೀಟರ್ ವರೆಗೆ ಕಾರ್ಯಕರ್ತರು ಬೈಕ್ ಮತ್ತು ಕಾರುಗಳಲ್ಲಿ ಮೆರವಣಿಗೆ ನಡೆಸಿದರು. ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಬಿ. ಬಿ. ಭಾರತೀಶ್. ತಾಲೂಕು ಅಧÀ್ಯಕ್ಷ ಮನುಕುಮಾರ್ ರೈ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವಿ.ಎಂ. ವಿಜಯ. ಜಿ.ಪಂ. ಮಾಜಿ ಸದಸ್ಯರಾದ ಮಂಜುಳ ಶ್ರೀನಿವಾಸ ಮತ್ತಿತರರು ಪಾಲ್ಗೊಂಡಿದ್ದರು.
ನಾಪೋಕ್ಲು : ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಜಯಗಳಿಸಿದ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಮಂಡೇಪAಡ ಸುಜಾ ಕುಶಾಲಪ್ಪ ಸೇರಿದಂತೆ ನಾಪೋಕ್ಲು ಬಿಜೆಪಿ ‘ಶಕ್ತಿ’ ಕೇಂದ್ರದ ವತಿಯಿಂದ ನಾಪೋಕ್ಲು ಪಟ್ಟಣದಲ್ಲಿ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ, ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಬಿನ್ ದೇವಯ್ಯ, ಮುಖಂಡರಾದ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಬಿ.ಎ.ಹರೀಶ್ ಸೇರಿದಂತೆ ಇತರ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.ಸುಂಟಿಕೊಪ್ಪ : ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸುಜಾಕುಶಾಲಪ್ಪ ಅವರನ್ನು ಸುಂಟಿಕೊಪ್ಪ ಬಿಜೆಪಿ ಪಕ್ಷದ ವತಿಯಿಂದ ಅಭಿನಂದಿಸಲಾಯಿತು. ಇಲ್ಲಿನ ಪ್ರವೇಶ ದ್ವಾರ ಅಯ್ಯಪ್ಪ ದೇವಸ್ಥಾನದ ಬಳಿಯಲ್ಲಿ ಶನಿವಾರ ರಾತ್ರಿ ಬಿಜೆಪಿ ಪಕ್ಷದ ಸುಜಾ ಅವರನ್ನು ಗೌರವಿಸಿ ನಂತರ ತರೆದ ವಾಹನದಲ್ಲಿ ಪಕ್ಷದ ಕಾರ್ಯಕರ್ತರು ಜಯಘೋಷಣೆ ಗಳನ್ನು ಕೂಗುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡಿಜೆಯೊಂದಿಗೆ ಕುಣಿಯುತ್ತಾ ಮೆರವಣಿಗೆ ನಡೆಸಿದರು. ಈ ಸಂದರ್ಭ ಶಾಸಕ ಎಂ. ಪಿ. ಅಪ್ಪಚ್ಚುರಂಜನ್, ನಗರ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ಗಳಾದ ಬಿ. ಕೆ. ಪ್ರಶಾಂತ್, ವಾಸು, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರಾಬಿನ್ ದೇವಯ್ಯ, ಓಬಿಸಿ ತಾಲೂಕು ಸದಸ್ಯರಾದ ಪಿ.ಆರ್.ಸುನಿಲ್ಕುಮಾರ್, ಜಿಲ್ಲಾ ಓಬಿಸಿ ಉಪಾಧ್ಯಕ್ಷ ಬಿ.ಕೆ.ಮೋಹನ್, ಯುವಮೋರ್ಚಾ ಅಧ್ಯಕ್ಷ ವಿಘ್ನೇಶ್, ಸುಂಟಿಕೊಪ್ಪ ಓಬಿಸಿ ಅಧ್ಯಕ್ಷ ಸಿ. ಸಿ. ಸುನಿಲ್, ಪಂಚಾಯಿತಿ ಸದಸ್ಯರುಗಳಾದ ಬಿ.ಎಂ.ಸುರೇಶ್, ಶಾಂತಿ, ವಸಂತಿ, ಮಂಜುಳ, ಗೀತಾ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಬಿಜೆಪಿ ಮುಖಂಡರು ಮತ್ತಿತರರು ಇದ್ದರು.