ಮಡಿಕೇರಿ, ಡಿ. ೧೯: ಟಿ.ಶೆಟ್ಟಿಗೇರಿ ಹಾಗೂ ಶ್ರೀಮಂಗಲ ಶೂರ‍್ಸ್ ಕ್ಲಬ್‌ನ ವತಿಯಿಂದ ತಾ. ೨೬ರಂದು ಶ್ರೀಮಂಗಲನಾಡ್ ಕೊಡವ ಸಮಾಜದ ಮೈದಾನದಲ್ಲಿ ‘ತೋಕ್ ನಮ್ಮೆ-೨೦೨೧’ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. .೨೨ ರೈಫಲ್, ೧೨ನೇ ಬೋರ್‌ನಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಹಾಗೂ ಏರ್‌ಗನ್‌ನಲ್ಲಿ ಕೋಳಿ ಮೊಟ್ಟೆಗೆ ಗುಂಡು ಹೊಡೆಯುವ ಪೈಪೋಟಿ ಜರುಗಲಿದೆ.
.೨೨ ರೈಫಲ್ ಸ್ಪರ್ಧಾ ವಿಜೇತರಿಗೆ ಪ್ರಥಮ ರೂ. ೨೫ ಸಾವಿರ, ದ್ವಿತೀಯ ರೂ. ೧೫ ಸಾವಿರ ಹಾಗೂ ತೃತೀಯ ರೂ. ೧೦ ಸಾವಿರ ಬಹುಮಾನವಿದೆ.
೧೨ನೇ ಬೋರ್ ವಿಭಾಗದಲ್ಲಿ ಪ್ರಥಮ ರೂ. ೨೦ ಸಾವಿರ, ದ್ವಿತೀಯ ರೂ. ೧೫ ಸಾವಿರ ಹಾಗೂ ತೃತೀಯ ರೂ. ೭,೫೦೦ ಮತ್ತು ಏರ್‌ಗನ್‌ನಲ್ಲಿ ಕೋಳಿ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧಾ ವಿಜೇತರಿಗೆ ರೂ. ೫ ಸಾವಿರ, ರೂ. ೩ ಸಾವಿರ ಹಾಗೂ ರೂ. ೨ ಸಾವಿರ ನಗದು ಬಹುಮಾನ ಹಾಗೂ ಎಲ್ಲಾ ಸ್ಪರ್ಧೆಗಳ ವಿಜೇತರಿಗೆ ಟ್ರೋಫಿ ನೀಡಲಾಗುವುದು. ಅಂದು ಬೆಳಿಗ್ಗೆ ೯ ರಿಂದ ಸ್ಪರ್ಧೆ ಆರಂಭವಾಗಲಿದೆ.
ಹೆಚ್ಚಿನ ವಿವರಗಳಿಗೆ ೯೪೪೮೮೧೩೮೬೫, ೮೭೬೨೦೦೫೮೯೮ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.