*ಸಿದ್ದಾಪುರ, ಡಿ. ೧೯: ಅಭ್ಯತ್‌ಮಂಗಲ, ಒಂಟಿಯAಗಡಿಯಿAದ ವಾಲ್ನೂರು, ಅಮ್ಮಂಗಲದವರೆಗೆ ಇರುವ ನಾಲೆಯನ್ನು ಸಣ್ಣ ನೀರಾವರಿ ಇಲಾಖೆಯ ಅನುದಾನದಿಂದÀ ಅಭಿವೃದ್ಧಿಪಡಿಸಲಾಗುತ್ತಿದೆ. ಮಣ್ಣಿನ ನಾಲೆಯ ನಿರ್ವಹಣಾ ವೆಚ್ಚ ದುಬಾರಿಯಾಗುತ್ತಿದ್ದ ಕಾರಣ ಶಾಶ್ವತ ಪರಿಹಾರವಾಗಿ ಕಾಂಕ್ರಿಟ್ ನಾಲೆಯನ್ನು ನಿರ್ಮಿಸಲಾಗುತ್ತಿದೆ.

ಸುಮಾರು ೧೨ ಕಿ.ಮೀ ಉದ್ದದ ನಾಲೆ ಪ್ರತಿ ಮಳೆ ಗಾಲದಲ್ಲಿ ಹಾನಿಗೀಡಾಗುತ್ತಿತ್ತು. ಮಣ್ಣು ಕುಸಿದು ಅಥವಾ ಅತಿಯಾದ ಮಳೆಯ ಪ್ರವಾಹ ದಿಂದ ಹಾನಿಯಾಗುತ್ತಿತ್ತು. ಅಲ್ಲದೆ ಹಿಟಾಚಿ ಯಂತ್ರದ ಮೂಲಕ ನಾಲೆಯ ದುರಸ್ತಿ ಕಾರ್ಯ ಕೈಗೊಳ್ಳುತ್ತಿದ್ದ ಪರಿಣಾಮ ಕುಸಿತ ಹೆಚ್ಚಾಗುತ್ತಿತ್ತು. ಅಕ್ಕಪಕ್ಕದ ಕೃಷಿಕರಿಗೆ ಇದರಿಂದ ಹೆಚ್ಚು ತೊಂದರೆಯಾಗುತ್ತಿತ್ತು. ಪ್ರತಿವರ್ಷ ಮಣ್ಣಿನ ನಾಲೆಯ ನಿರ್ವಹಣೆಗಾಗಿ ಲಕ್ಷಾಂತರ ರೂ. ವಿನಿಯೋಗವಾಗುತ್ತಿತ್ತು. ಇದನ್ನು ಅರಿತ ಕೃಷಿಕರು ಕಾಂಕ್ರಿಟ್ ನಾಲೆಯನ್ನು ನಿರ್ಮಿಸುವ ಮೂಲಕ ಶಾಶ್ವತ ಪರಿಹಾರವನ್ನು ಸೂಚಿಸಬೇಕೆಂದು ಈ ಹಿಂದೆ ಒತ್ತಾಯಿಸಿದ್ದರು.

ಇದಕ್ಕೆ ಸ್ಪಂದಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾಂಕ್ರಿಟ್ ನಾಲೆ ನಿರ್ಮಾಣಕ್ಕೆ ಯೋಜನೆ ರೂಪಿಸಿದರು. ಇದೀಗ ಕಾಮಗಾರಿ ಭರದಿಂದ ಸಾಗಿದ್ದು, ಈ ಭಾಗದ ನೀರುಗಂಟಿ ರಮೇಶ ಅವರು ನಾಲೆ ನಿರ್ವಹಣೆ ಕುರಿತು ಹೆಚ್ಚು ಕಾಳಜಿ ತೋರಿದ್ದಾರೆ.