ಕೂಡಿಗೆ, ಡಿ. ೧೯: ತನ್ನ ಮನೆಯ ಹಿಂಭಾಗದ ಹೊಲದಲ್ಲಿ ಗಾಂಜಾ ಬೆಳೆಸಿದ್ದ ತೊರೆನೂರು ಗ್ರಾಮದ ಹನುಮಯ್ಯ ಎಂಬಾತನನ್ನು ಪೊಲೀಸರು ಬಂಧಿಸಿ ಒಂದು ಕೆ.ಜಿ.ಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್, ಸಹಾಯಕ ಠಾಣಾಧಿಕಾರಿ ರವಿ, ಸಿಬ್ಬಂದಿಗಳಾದ ಶ್ರೀನಿವಾಸ, ಅಜಿತ್, ಶನತ್ ಮಹೇಶ್, ಚಾಲಕ ಯೋಗೇಶ್ ಪಾಲ್ಗೊಂಡಿದ್ದರು.