ಸೋಮವಾರಪೇಟೆ, ಡಿ. ೧೮: ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಭಾಗವಹಿಸಿದ ಭಾರತ ಜೂನಿಯರ್ ಹಾಕಿ ತಂಡದ ಸಹಾಯಕ ಕೋಚಾಗಿದ್ದ ಸೋಮವಾರಪೇಟೆಯ ಹಿರಿಯ ಹಾಕಿ ಆಟಗಾರ ಜನಾರ್ಧನ್ ಅವರನ್ನು ಬ್ಲೂ ಸ್ಟಾರ್ ಹಾಕಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಪಟ್ಟಣದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬ್ಲೂ ಸ್ಟಾರ್ ಸಂಸ್ಥೆಯ ಅಧ್ಯಕ್ಷ ಯಶವಂತ್, ಗೌರವಾಧ್ಯಕ್ಷ ಬಿ.ಎಂ. ಸುರೇಶ್, ಕಾರ್ಯದರ್ಶಿ ಅರುಣ್, ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು ಸೇರಿದಂತೆ ಪದಾಧಿಕಾರಿಗಳು, ಕ್ರೀಡಾಪ್ರೇಮಿಗಳು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜನಾರ್ಧನ್ ಅವರು, ಕೊಡಗು ಜಿಲ್ಲೆ ಹಾಕಿಯ ತವರೂರಾಗಿದ್ದು, ಇಲ್ಲಿ ಕ್ರೀಡಾಭ್ಯಾಸ ಮಾಡಿದ ಅನೇಕ ಕ್ರೀಡಾಪಟುಗಳು ರಾಜ್ಯ, ರಾಷ್ಟç, ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ.ಪಂ. ಸದಸ್ಯರುಗಳಾದ ಮೃತ್ಯುಂಜಯ, ಬಿ.ಆರ್. ಮಹೇಶ್, ಶುಭಕರ್, ಕರವೇ ಅಧ್ಯಕ್ಷ ಕೆ.ಎನ್. ದೀಪಕ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ, ಭಜರಂಗದಳ ತಾಲೂಕು ಸಂಚಾಲಕ ನೇಗಳ್ಳೆ ಜೀವನ್, ಸಂಸ್ಥೆಯ ಅಭಿಷೇಕ್ ಗೋವಿಂದಪ್ಪ, ಅರುಣ್ ರೈ ಸೇರಿದಂತೆ ಇತರರು ಉಪಸ್ಥಿತರಿದ್ದರು.