ಪೊನ್ನಂಪೇಟೆ, ಡಿ. ೧೮: ಪೊನ್ನಂಪೇಟೆಯ ಹಳ್ಳಿಗಟ್ಟುವಿ ನಲ್ಲಿರುವ ಕೊಡಗಿನ ಪ್ರಮುಖ ಇಂಜಿನಿಯರಿAಗ್ ಕಾಲೇಜು ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ (ಸಿಐಟಿ) ಅನ್ನು ನಡೆಸುತ್ರಿರುವ ಕೊಡವ ಎಜುಕೇಶನ್ ಸೊಸೈಟಿ (ಕೆಇಎಸ್)ನ ವಾರ್ಷಿಕ ಸಾಮಾನ್ಯ ಸಭೆ ಇತ್ತೀಚೆಗೆ ನಡೆಯಿತು.

ಕೆಇಎಸ್ ಅಧ್ಯಕ್ಷ ಸಿ.ಪಿ. ಬೆಳ್ಳಿಯಪ್ಪ ಅಧ್ಯಕ್ಷತೆಯಲ್ಲಿ ಮಹಾಸಭೆ ಜರುಗಿತು. ಸಭೆಯಲ್ಲಿ ಸಂಸ್ಥೆಯ ಚಟುವಟಿಕೆ - ಸಾಧನೆಗಳ ಬಗ್ಗೆ ಚರ್ಚಿಸಲಾಯಿತು. ಇದಕ್ಕೂ ಮುನ್ನ ಸಿಐಟಿಯು ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗವನ್ನು ದಾನಿಗಳಾದ ಚೋಡುಮಾಡ ಶಾಂತಿ ಪಾರ್ವತಿ ಮತ್ತು ಚೋಮಣಿ ಅಪ್ಪಯ್ಯ ದಂಪತಿಯ ಗೌರವಾರ್ಥದ ನಾಮಫಲಕವನ್ನು ಅತಿಥಿಗಳಾದ ಬೆಳ್ಳಿಯಪ್ಪ ಮತ್ತು ಮಾಜಿ ಸಚಿವ ಯಂ.ಸಿ. ನಾಣಯ್ಯ ಅನಾವರಣಗೊಳಿಸಿದರು.

ಇದೇ ದಂಪತಿಯ ಹೆಸರಿನಲ್ಲಿ ನಿರ್ಮಿಸಿರುವ ಇನ್ನೊಂದು ನಾಮಫಲಕವನ್ನು ಕೆಇಎಸ್‌ನ ಖಜಾಂಚಿ ಜಾಜಿ ಉತ್ತಪ್ಪ ಹಾಗೂ ಉಪಾಧ್ಯಕ್ಷ ಎಂ.ಟಿ. ನಾಣಯ್ಯ ಅವರು ಅನಾವರಣಗೊಳಿಸಿದರು.

ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ನಿರ್ಮಿಸಿದ ಎಲೆಕ್ಟಿçಕಲ್ ವೆಹಿಕಲ್ ಇಗಿ-ಕೋಲ್ಡ್ ಅನ್ನು ಕೆಇಎಸ್‌ನ ಉಪಾಧ್ಯಕ್ಷ ಡಾ. ಎಂ.ಸಿ. ಕಾರಿಯಪ್ಪ ಹಾಗೂ ಕೆಇಎಸ್‌ನ ಗೌರವ ಕಾರ್ಯದರ್ಶಿ ರಾಕೇಶ್ ಪೂವಯ್ಯ ಉದ್ಘಾಟಿಸಿದರು. ಈ ಸಂದರ್ಭ ಕೆಇಎಸ್‌ನ ಜಂಟಿ ಕಾರ್ಯದರ್ಶಿ ಸಿ. ರಾಜ ನಂಜಪ್ಪ ಉಪಸ್ಥಿತರಿದ್ದರು.

ಕೆಇಎಸ್‌ನ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯು ಮಹಾಸಭೆಗೆ ಮುಂಚಿತವಾಗಿ ನಡೆಯಿತು. ಕೆಇಎಸ್‌ನ ನಿರ್ದೇಶಕರು, ಸದಸ್ಯರು, ಸಿ.ಐ.ಟಿ.ಯ ಪ್ರಾಂಶುಪಾಲ ಡಾ. ಎಂ. ಬಸವರಾಜ್ ಮತ್ತು ಸಿ.ಐ.ಪಿ.ಯು.ಸಿ. ಪ್ರಾಂಶುಪಾಲೆ ಡಾ. ರೋಹಿಣಿ ತಿಮ್ಮಯ್ಯ ಭಾಗವಹಿಸಿದ್ದರು.