ಶನಿವಾರಸಂತೆ, ಡಿ. ೧೭: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ತಾ. ೧೯ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಶನಿವಾರಸಂತೆ ಟೌನ್ ಫೀಡರ್ನಲ್ಲಿ ಹಳೆ ವಯರ್ ಅನ್ನು ಬದಲಾಯಿಸಿ ಹೊಸ ಕವರ್ ಕಂಡಕ್ಟರ್ ಅನ್ನು ಹಾಕುವ ನಿಮಿತ್ತ ಟೌನ್ ಫೀಡರ್ ವ್ಯಾಪ್ತಿಗೆ ಒಳಪಡುವ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಗುಂಡೂರಾವ್ ಬಡಾವಣೆ, ತ್ಯಾಗರಾಜ ಕಾಲೋನಿ, ಬಿದರೂರು, ಹೆಮ್ಮನೆ, ಚಿಕ್ಕಕೊಳತ್ತೂರು, ಮಾದ್ರೆ, ಶೆಟ್ಟಿಗನಹಳ್ಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ಈ ಕಾಮಗಾರಿ ಮುಗಿಯುವವರೆಗೆ ಟೌನ್ ವ್ಯಾಪ್ತಿಯಲ್ಲಿ ಸುಮಾರು ೧೫ ದಿನಗಳವರೆಗೆ ಆಗಾಗ್ಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಸೆಸ್ಕ್ ಕಿರಿಯ ಸಂಪರ್ಕಾಧಿಕಾರಿ ಹೇಮಂತ್ ಕೋರಿದ್ದಾರೆ.