ಮಡಿಕೇರಿ, ಡಿ. ೧೮: ೨೦೨೧ ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಅನೇಕ ರೈತರು ಡ್ರಂ ಸೀಡರ್ನಿಂದ ಭತ್ತ ಬಿತ್ತನೆ ಮಾಡಿ, ಕಡಿಮೆ ಖರ್ಚಿನಲ್ಲಿ ಕೃಷಿ ಮಾಡುತ್ತಿರುವುದು ಬಹಳ ಸಂತಸದ ವಿಷಯವಾಗಿದೆ. ಕೈನಾಟಿ ಅಥವಾ ಇತರೆ ಭತ್ತ ಕೃಷಿಗೆ ಹೋಲಿಸಿದಾಗ ಡ್ರಂ ಸೀಡರ್ನಿಂದ ಬಿತ್ತಿದ ಭತ್ತವು ಹೆಚ್ಚಿನ ಇಳುವರಿ ನೀಡಲಿದೆ.
ಸಾಮಾನ್ಯವಾಗಿ ಕೈನಾಟಿ ಮಾಡಿದಾಗ ಭತ್ತದ ಪೈರನ್ನು ಕಿತ್ತು ನಾಟಿಮಾಡ ಬೇಕಾಗುತ್ತದೆ, ನಾಟಿ ಮಾಡಿದ ನಂತರ ಹೊಸ ಬೇರು ಬಂದು ಗಿಡ ಬೆಳೆಯಲು ಸ್ವಲ್ಪ ಸಮಯ ಬೇಕಾಗುತ್ತದೆ ಜೊತೆಗೆ ಪೈರು ಕೆಲ ಕಾಲ ನಾಟಿ ಒತ್ತಡಕ್ಕೆ ಒಳಪಡುವುದರಿಂದ ಕದಿರುಗಳ ಸಂಖ್ಯೆ ಕಡಿಮೆಯಾಗುತ್ತದೆ. ಡ್ರಂ ಸೀಡರ್ನಿಂದ ಬಿತ್ತಿದ ಭತ್ತದಲ್ಲಿ ಈ ಸಮಸ್ಯೆ ಇಲ್ಲದಿರುವುದರಿಂದ ಹೆಚ್ಚಿನ ಕದಿರುಗಳಿಂದ ಅಧಿಕ ಇಳುವರಿ ಸಾಧ್ಯವಾಗುತ್ತದೆ ಎಂದು ಡ್ರಂ ಸೀಡರ್ ಭತ್ತ ಬಿತ್ತನೆ ಪ್ರಾಯೋಜನೆಯ ಪ್ರಧಾನ ಸಂಶೋಧಕ ಡಾ. ಬಸವಲಿಂಗಯ್ಯ ಅವರು ತಿಳಿಸಿದರು.
ರೈತ ಮಹಿಳೆಯರಾದ ಪುಷÀ್ಪ ಉಳುವಾರನ ಪ್ರಭಾಕರ್ ಹಾಗೂ ಹಂಸಿ ಉಳುವಾರನ ದೀಲಿಪ್ ಮಾತನಾಡಿ ಮೊದಲು ಗದ್ದೆಯಲ್ಲಿ ಪೈರುಗಳೇ ಇಲ್ಲದಾಗಿತ್ತು ನಂತರದಲ್ಲಿ ಪೈರುಗಳು ಕಂಡು ಅತಿ ಹೆಚ್ಚಿನ ಕದಿರುಗಳು ಬಂದು ಬೆಳೆ ಸೊಗಸಾಗಿ ಬಂದಿರುವುದು ಖುಷಿ ತಂದಿದೆ ಎಂದರು. ಸುತ್ತಮುತ್ತಲಿನ ಗಾಮಗಳ ಕೃಷಿಕರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮವನ್ನು ಚರಣ್ ಎಂ. ಆರ್. ಮತ್ತು ಜಗನ್ ಬಿ. ಜಿ. ನಿರೂಪಿಸಿದರು.