ಗುಡ್ಡೆಹೊಸೂರು: ಒಕ್ಕಲಿಗರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಜಯಶೀಲರಾದ ಹರಪಳ್ಳಿ ರವೀಂದ್ರ ಅವರನ್ನು ಅಭಿಮಾನಿಗಳು ಮಡಿಕೇರಿಯಿಂದ ಸೋಮವಾರಪೇಟೆಗೆ ಹೋಗುವ ದಾರಿಯ ಮಧ್ಯದ ಹಲವು ಭಾಗದ ಸ್ಥಳಗಳಲ್ಲಿ ವಿಜಯೋತ್ಸವ ಆಚರಿಸಿದರು.
ಅದೇ ರೀತಿ ವಾಲಗ ತಂಡದೊAದಿಗೆ ಅಭ್ಯರ್ಥಿ ಸಮೇತ ಗುಡ್ಡೆಹೊಸೂರಿಗೆ ಆಗಮಿಸಿದ ಸಂದರ್ಭ ತ್ಯಾಗತ್ತೂರಿನ ಮನುಮಹೇಶ್, ಮುಂಡ್ರುಮನೆ ಗಿರೀಶ್, ಹರೀಶ್, ಜಯಂತ್, ಕುಡೆಕ್ಕಲ್ ನಿತ್ಯ, ತಿಮ್ಮಯ್ಯ, ಪಂಜಿಪಳ್ಳ ಯತೀಶ್ ಹಾಗೂ ಸೋಮವಾರ ಪೇಟೆ ವಿಭಾಗದ ಹಲವು ಮಂದಿ ಹಾಜರಿದ್ದರು. ಈ ಸಂಧರ್ಭ ಅಭಿಮಾನಿಗಳು ಗುಡ್ಡೆಹೊಸೂರಿನ ವೃತ್ತದ ಬಳಿ ಕುಣಿದು ಸಂಭ್ರಮಿಸಿದರು.ಕೂಡಿಗೆ: ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ವಿಜೇತರಾದ ಹೆಚ್.ಎನ್. ರವೀಂದ್ರ ಅವರ ಬೆಂಬಲಿಗರು ಕೂಡಿಗೆಯಲ್ಲಿ ವಿಜಯೋತ್ಸವ ಆಚರಣೆ ಮಾಡಿದರು. ಈ ಸಂದರ್ಭ ಪಟಾಕಿ ಸಿಡಿಸಿ ಸಿಹಿ ಹಂಚಿ ವಾಲಗದ ತಾಳಕ್ಕೆ ತಕ್ಕಂತೆ ಕುಣಿದರು.ಸೋಮವಾರಪೇಟೆ: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ರವೀಂದ್ರ ಹೆಚ್.ಎನ್. ಅವರು ಜಯಗಳಿಸಿದ ಹಿನ್ನೆಲೆ ಸೋಮವಾರಪೇಟೆಯ ಹರಪಳ್ಳಿ ರವೀಂದ್ರ ಅಭಿಮಾನಿಗಳ ಬಳಗದಿಂದ ಸಂಭ್ರಮಾಚರಣೆ ನಡೆಯಿತು.
ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಲಾಯಿತು. ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್, ರಘು, ಅಜಯ್ ಸೇರಿದಂತೆ ಇತರರು ಭಾಗವಹಿಸಿದ್ದರು.ಶನಿವಾರಸಂತೆ: ರಾಜ್ಯ ಒಕ್ಕಲಿಗರ ಸಂಘದ ಕೊಡಗು ಜಿಲ್ಲಾ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹರಪಳ್ಳಿ ರವೀಂದ್ರ ಅವರು ಜಯಗಳಿಸಿದ್ದು, ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ನಂತರ ರವೀಂದ್ರ ಅವರು ಮಾತನಾಡಿ, ತನ್ನ ಗೆಲುವಿನ ಹಿಂದೆ ಕಾರ್ಯಕರ್ತರು, ಅಭಿಮಾನಿಗಳು ಇದ್ದಾರೆ. ಸಮುದಾಯದ ಮುಖಂಡರು, ಜನಾಂಗ ಬಾಂಧವರ ಸಹಕಾರದಿಂದ ಗೆಲುವು ಸಾಧ್ಯವಾಗಿದೆ. ರಾಜ್ಯ ಒಕ್ಕಲಿಗರ ಸಂಘದಿAದ ಸಿಗುವ ಸೌಲಭ್ಯಗಳನ್ನು ಜಿಲ್ಲೆಗೆ ಒದಗಿಸುವ ಭರವಸೆ ನೀಡುತ್ತೇನೆ. ಸಮುದಾಯದ ಸಾಮಾಜಿಕ ಬೆಳವಣಿಗೆಗೂ ಶ್ರಮಿಸುತ್ತೇನೆ ಎಂದರು.
ಸಮುದಾಯದ ಮುಖಂಡರಾದ ಸಿ.ಜೆ. ಗಿರೀಶ್, ಅಪ್ಪಸ್ವಾಮಿ, ಯೋಗೇಂದ್ರ, ತಮ್ಮಣ್ಣಿ, ದಿನೇಶ್, ಡಿ.ಪಿ. ಮಂಜುನಾಥ್, ಗಿರೀಶ್, ಸತೀಶ್, ಜೆ.ಡಿ.ಎಸ್. ಮುಖಂಡ ಆದಿಲ್ ಪಾಶ, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.