ಮಡಿಕೇರಿ, ಡಿ. ೧೮: ಕೊಡವರು ಪೂಜನೀಯ ಭಾವದಲ್ಲಿ ಕಾಣುವ ಕೋವಿಯನ್ನು ಸಂವಿಧಾನದ ೨೫ ಮತ್ತು ೨೬ನೇ ವಿಧಿಯಲ್ಲಿ ಸೇರಿಸಿ ಧಾರ್ಮಿಕ ಸಂಸ್ಕಾರ ಹಕ್ಕೆಂದು ಪರಿಗಣಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ) ಸಂಘಟನೆಯ ಸಂಚಾಲಕ ನಂದಿನೆರವAಡ ಯು. ನಾಚಪ್ಪ ಆಗ್ರಹಿಸಿದರು.
ಮೂರ್ನಾಡು ಸಮೀಪದ ಬಲಂಬೇರಿ ರಸ್ತೆಯಲ್ಲಿರುವ ಕಾಫಿ ಕ್ಯಾಸಲ್ ಕೂರ್ಗ್ ರೆಸಾರ್ಟ್ನಲ್ಲಿ ೧೨ನೇ ವರ್ಷದ ‘ತೋಕ್ ನಮ್ಮೆ’ಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಕಳೆದ ೩೧ ವರ್ಷದಿಂದ ಕೊಡವರ ಸಂಸ್ಕೃತಿ, ಭಾಷೆಯ ರಕ್ಷಣೆಗೆ ನಿರಂತರವಾಗಿ ಸಿಎನ್‌ಸಿ ಹೋರಾಡುತ್ತಿದೆ. ನಮ್ಮ ಹೋರಾಟ ಫಲ ನೀಡುವ ಕಾಲ ಸನ್ನಿಹಿತವಾಗುತ್ತಿದೆ. ಕೇವಲ ಕ್ರಾಂತಿಯಿAದ ಹೋರಾಟಕ್ಕೆ ಮನ್ನಣೆ ಸಿಗುತ್ತದೆ ಎಂದು ಜನರು ನಂಬಿದ್ದಾರೆ. ಸಂವಿಧಾನಾತ್ಮಕ ಹಾಗೂ ಸಂಘಟಿತವಾಗಿ ಪ್ರಯತ್ನಿಸಿದರೆ ಹೋರಾಟ ಫಲ ಸಿಗುತ್ತದೆ ಎಂಬುದಕ್ಕೆ ಸಿ.ಎನ್.ಸಿ.ಯ ಹೋರಾಟ ಉದಾಹರಣೆಯಾಗಿದೆ. ನಮ್ಮ ಬೇಡಿಕೆಗಳು ನ್ಯಾಯಯುತ ಹಾಗೂ ಸರಿ ದಾರಿಯಲ್ಲಿ ಸಾಗಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಕೊಡವರÀ ಪರ ಬೇಡಿಕೆ ಇಡುತ್ತಿರುವ ಸಂಘಟನೆಗಳು ಸರಿದಾರಿಯಲ್ಲಿ ಸಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕೊಡವರ ಬಗ್ಗೆ ಕೇವಲ ಭಾಷಣಗಳಲ್ಲಿ ಹೊಗಳುವ ರಾಜಕೀಯ ನಾಯಕರುಗಳಿಗೆ ಇಲ್ಲಿನ ಸಮಸ್ಯೆಗಳು, ಬೇಡಿಕೆಗಳಿಗೆ ಸ್ಪಂದಿಸುವ ಮನಸ್ಸಿಲ್ಲ. ಸಂವಿಧಾನದಡಿಯಲ್ಲಿ ಕೊಡವ ಪದ ಬಳಕೆಗೆ ಸಿ.ಎನ್.ಸಿ. ಅವಿರತವಾಗಿ ಶ್ರಮಿಸಿದೆ. ಇದರ ಫಲವಾಗಿ ನ್ಯಾಯಾಲಯ £ ಪರ ತೀರ್ಪು ನೀಡಿದೆ. ಮುಂದಿನ ದಿನಗಳಲ್ಲಿ ಇದು ಕೊಡವರಿಗೆ ಲಾಭವಾಗಲಿದೆ ಎಂದ ನಾಚಪ್ಪ, ಸಾವಿರಾರೂ ವರ್ಷಗಳ ಇತಿಹಾಸ ಹೊಂದಿರುವ ಕೋವಿಯನ್ನು ಶಾಸನಬದ್ಧಗೊಳಿಸಬೇಕು. ಕೆಲವರಿಂದ ಕೊಡವರ ಕೋವಿ ಹಕ್ಕು ಕಸಿಯುವ ಯತ್ನವಾಗುತ್ತಿದ್ದು, ಈ ನಿಟ್ಟಿನಲ್ಲಿ ವ್ಯವಸ್ಥಿತ ಪಿತೂರಿ ಕೂಡ ನಡೆಯುತ್ತಿದೆ. ಬಂದೂಕು ಕೊಡವ ಬುಡಕಟ್ಟು ಜನಾಂಗದ ಅವಿಭಾಜ್ಯ ಅಂಗವಾಗಿದೆ. ಇದು ಬೇರ್ಪಟ್ಟಲ್ಲಿ ಸಂಪ್ರದಾಯ ಎರಡೂ ನಾಶವಾಗುತ್ತದೆ. ಈ ಹಿನ್ನೆಲೆ ಸರಕಾರ ಕೊಡವ ಅನನ್ಯತೆಯ ಹಕ್ಕನ್ನು ರಕ್ಷಿಸಬೇಕು. ಅಫ್ಘಾನಿಸ್ತಾನದ ‘ಬುಜ್ಕಾಶಿ' ಕ್ರೀಡೆಗಳು ಮತ್ತು ಮಧ್ಯ ಏಷ್ಯಾದ ಇತರ ದೇಶಗಳ ‘ಕೊಪ್ಕರ್' ಕ್ರೀಡೆಗಳ ಮಾದರಿಯಲ್ಲಿ ಕೊಡವ ‘ಗನ್-ಕಾರ್ನಿವಲ್’ (ತೋಕ್ ನಮ್ಮೆ) ಅನ್ನು ಕೊಡವ "ಎಥ್ನೋ ನ್ಯಾಷÀನಲ್ ಸ್ಪೋರ್ಟ್ಸ್" ಎಂದು ಘೋಷಿಸ ಬೇಕೆಂದು ನಾಚಪ್ಪ ಆಗ್ರಹಿಸಿದರು.
ಕೊಡವರು ಬಳಸುವ ವಿನಾಯಿತಿ ಬದ್ಧ ಬಂದೂಕಿಗೆ ನ್ಯಾಯಾಲಯ ನೀಡಿರುವ ತೀರ್ಪು ಕಾಲಮಿತಿ ಹೊಂದಿದೆ. ೧೦ ವರ್ಷದ ಬಳಿಕ ಮತ್ತೆ ಇದಕ್ಕೆ ಹೋರಾಟ ಮಾಡಬೇಕಾಗಿದೆ. ಈ ಹಿನ್ನೆಲೆ ಸಂವಿಧಾನದ ೨೫ ಮತ್ತು ೨೬ ನೇ ವಿಧಿಯಲ್ಲಿ ಸೇರಿಸಿ ಧಾರ್ಮಿಕ ಸಂಸ್ಕಾರ ಹಕ್ಕೆಂದು ಕೋವಿಯನ್ನು ಪರಿಗಣಿಸಬೇಕಾಗಿದೆ ಎಂದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಸಾಂಪ್ರದಾಯಿಕ ಧಿರಿಸಿನಲ್ಲಿ ಕೊಡವರು ಬಂದೂಕು ಹಿಡಿದು ಮೆರವಣಿಗೆ ನಡೆಸಿ,
(ಮೊದಲ ಪುಟದಿಂದ) ಬಾಳೆ ಕಡಿದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜೊತೆಗೆ ಬಂದೂಕಿನ ಮುಂದೆ ಮೃತಪಟ್ಟ ಹಿರಿಯರುಗಳಿಗೆ ಮೀದಿ ಅರ್ಪಿಸಲಾಯಿತು.
ಕೊಡವಭೂಷಣ ಪ್ರದಾನ
ವಿವಿಧ ಕ್ಷೇತ್ರದ ಸಾಧಕರಿಗೆ ಕಾರ್ಯಕ್ರಮದಲ್ಲಿ ಕೊಡವಭೂಷಣ ಬಿರುದನ್ನು ನೀಡಿ ಗೌರವಿಸಲಾಯಿತು. ಸಹಕಾರ ಕ್ಷೇತ್ರದಲ್ಲಿ ದುಡಿದ
ಕೂಪದಿರ ಉತ್ತಪ್ಪ, ಧಾರ್ಮಿಕ ಕ್ಷೇತ್ರದಲ್ಲಿ ಬಾಚಮಂಡ ರಾಜಾ ಪೂವಣ್ಣ, ಕಲೆ ಕ್ಷೇತ್ರದಲ್ಲಿ ಅಜ್ಜಮಾಡ ಸಾವಿತ್ರಿ, ಚಂಡೀರ ರಾಜ ತಿಮ್ಮಯ್ಯ, ದುಡಿಕೊಟ್ಟ್ ಕಲಾವಿದ ಐಲಪಂಡ ಮಿಟ್ಟು, ಸಾಮಾಜಿಕ ಕ್ಷೇತ್ರದಲ್ಲಿ ಮುಕ್ಕಾಟೀರ ಕಿಟ್ಟು ಮುತ್ತಣ್ಣ ಅವರುಗಳನ್ನು ಸನ್ಮಾನಿಸಲಾಯಿತು.
ಗುಂಡು ಹೊಡೆಯುವ ಸ್ಪರ್ಧೆ
‘ತೋಕ್ ನಮ್ಮೆ’ ಅಂಗವಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಹಿಳೆಯರು, ಪುರುಷರು, ಬಾಲಕ-ಬಾಲಕಿಯರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮರದ ಮೇಲೆ ಕಟ್ಟಿದ್ದ ತೆಂಗಿನ
ಕಾಯಿಗೆ ಗುಂಡು ಹೊಡೆಯುವ ಪ್ರಯತ್ನವನ್ನು ಸ್ಪರ್ಧಿಗಳು
ಮಾಡಿದರು.
ಪುರುಷರ ವಿಭಾಗದಲ್ಲಿ ಚೌರೀರ ಪೊನ್ನಣ್ಣ (ಪ್ರಥಮ), ನೆಲ್ಲಮಕ್ಕಡ ವಿವೇಕ್ (ದ್ವಿ), ಬಡುವಂಡ ಶ್ಲೋಕ್ ಸುಬ್ಬಯ್ಯ (ತೃ), ಮಹಿಳೆಯರ ವಿಭಾಗದಲ್ಲಿ ಬೊಟ್ಟಂಗಡ ಸವಿ ಮೀನಾಕ್ಷಿ (ಪ್ರ), ನಂದಿನೆರವAಡ ಪಾರ್ವತಿ (ದ್ವಿ) ಸ್ಥಾನ ಪಡೆದರು. ರೆಸಾರ್ಟ್ ಮಾಲೀಕ ಚೇನಂಡ ಪ್ರಥ್ವಿ ದೇವಯ್ಯ ತಮ್ಮ ತಂದೆಯ ಜ್ಞಾಪಕಾರ್ಥವಾಗಿ ವಿಜೇತರಿಗೆ ಟ್ರೋಫಿ ಪ್ರಾಯೋಜಿಸಿದರು.
ಕಾರ್ಯಕ್ರಮದಲ್ಲಿ ಸಿ.ಎನ್.ಸಿ. ಪ್ರಮುಖರಾದ ಕಲಿಯಂಡ ಪ್ರಕಾಶ್, ಬಾಚಮಂಡ ರಾಜ, ಬಾಚರಣಿಯಂಡ ಚಿಣ್ಣಪ್ಪ, ಪುಲ್ಲೇರ ಸ್ವಾತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.