ಮಡಿಕೇರಿ, ಡಿ.೧೮ : ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘವು ಪ್ರಸ್ತುತ ಸಾಲಿನಲ್ಲಿ ರೂ.೭.೯೩ ಲಕ್ಷ ಲಾಭಗಳಿಸಿದ್ದು, ಸದಸ್ಯರುಗಳಿಗೆ ಶೇ.೧೫ ರಷ್ಟು ಡಿವಿಡೆಂಟ್ನ್ನು ಘೋಷಿಸ ಲಾಗಿದೆ ಎಂದು ಸಂಘದ ಅಧ್ಯಕ್ಷ ಸೂದನ ಎಸ್.ಈರಪ್ಪ ತಿಳಿಸಿದ್ದಾರೆ.
ನಗರದ ಕೆಳಗಿನ ಕೊಡವ ಸಮಾಜದಲ್ಲಿ ನಡೆದ ಸಂಘದ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುಮಾರು ೩೭ ವರ್ಷಗಳಿಂದ ಸ್ಥಗಿತಗೊಂಡಿದ್ದ ಏಲಕ್ಕಿ ಮಾರಾಟ ವ್ಯವಹಾರವನ್ನು ಸಂಘವು ಕಳೆದ ೬ ತಿಂಗಳಿನಿAದ ಆರಂಭಿಸಿದೆ. ಏಲಕ್ಕಿ ಮತ್ತು ಕರಿಮೆಣಸನ್ನು ಸಂಘದ ಸದಸ್ಯರು ಹಾಗೂ ಬೆಳೆಗಾರರಿಂದ ಪಡೆದು ಮುಂಗಡ ನೀಡಿ ಸಂಘದಲ್ಲಿ ಈಡು ಇಟ್ಟುಕೊಳ್ಳಲಾಗುವುದು. ಉತ್ತಮ ದರ ಬಂದ ನಂತರ ಮಾರಾಟ ಮಾಡಿಕೊಡಲಾಗುವುದು ಎಂದು ತಿಳಿಸಿದ ಸೂದನ ಈರಪ್ಪ, ಸರ್ವ ಸದಸ್ಯರು ಹಾಗೂ ಬೆಳೆಗಾರರು ಇದರ ಪ್ರಯೋಜನ ಪಡೆದು ಕೊಳ್ಳುವಂತೆ ಮನವಿ ಮಾಡಿದರು.
ಸಂಘದ ಮುಖ್ಯ ಕಚೆೆÃರಿ ಮತ್ತು ಸೋಮವಾರಪೇಟೆ ಶಾಖೆಯ ಹತ್ಯಾರು ವಿಭಾಗಗಳಲ್ಲಿ ಕಾಫಿ ತಾಟು, ಚೀಲ, ಟಾರ್ಪಲ್, ಸಿಮೆಂಟ್ ಶೀಟುಗಳು, ಕೃಷಿ ಪರಿಕರಗಳು ಸೇರಿದಂತೆ, ಕ್ರಿಮಿನಾಶಕಗಳು, ತೋಟಗಳಿಗೆ ಹಾಕುವ ಮಿನ್ಶಕ್ತಿ (ಡೋಲೋಮೆಟ್) ಸುಣ್ಣ, ಹಂಚುಗಳು ಉತ್ತಮ ಗುಣಮಟ್ಟದಲ್ಲಿ ಕಡಿಮೆ ದರದಲ್ಲಿ ಸಂಘದಲ್ಲಿಯೇ ದೊರೆಯುತ್ತದೆ. ಸಂಘದ ಸದಸ್ಯರುಗಳಿಗೆ ಕಬ್ಬಿಣ ಸೇರಿದಂತೆ ಹಲವು ಸಾಮಗ್ರಿಗಳ ಖರೀದಿ ಮೇಲೆ ಶೇ.೨ ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
(ಮೊದಲ ಪುಟದಿಂದ) ಸದಸ್ಯರುಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೋರಿದರು.
ಸಂಘದ ನಿರ್ದೇಶಕರುಗಳಾದ ಬಿ.ಈ. ಬೋಪಯ್ಯ, ಎಂ.ಜಿ. ಮೋಹನ್ದಾಸ್, ಬಿ.ಸಿ. ಚೆನ್ನಪ್ಪ, ಎ.ಎಂ. ಗೋಪಾಲಕೃಷ್ಣ, ಎಸ್.ಎಸ್. ಸುರೇಶ, ಕೆ.ಡಿ. ವಿನೋದ್ಕುಮಾರ್, ಪಿ.ಕೆ. ಉದಯ್ಕುಮಾರ್, ಸಿ.ಪಿ. ವಿಜಯ್ ಕುಮಾರ್, ಪಿ.ಟಿ. ಬೋಪಣ್ಣ, ಹೆಚ್.ಎ. ಬೊಳ್ಳು, ಕೆ.ಬಿ. ಬೆಳ್ಯಪ್ಪ, ಪಿ.ಎಸ್. ಕವಿತ, ಸಂಘದ ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎA. ತಮ್ಮಯ್ಯ ನಿರೂಪಿಸಿ, ನಿರ್ದೇಶಕಿ ಅಂಬೆಕಲ್ಲು ಸುಶೀಲ ಕುಶಾಲಪ್ಪ ಪ್ರಾರ್ಥಿಸಿದರು. ಉಪಾಧ್ಯಕ್ಷ ಕೆ.ಕೆ. ಗೋಪಾಲ ಸ್ವಾಗತಿಸಿ, ನಿರ್ದೇಶಕ ಕೊಳುಮುಡಿಯನ ಆರ್. ಅನಂತ್ಕುಮಾರ್ ವಂದಿಸಿದರು. ಮೃತಪಟ್ಟ ಸಂಘದ ಸದಸ್ಯರುಗಳಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.