ಶನಿವಾರಸಂತೆ, ಡಿ. ೧೮: ಹಿಂದೂ ಜಾಗರಣ ವೇದಿಕೆ ಕೊಡಗು ಜಿಲ್ಲೆ ಹಿಂದೂ ಯುವ ವಾಹಿನಿ ಸೋಮವಾರಪೇಟೆ ತಾಲೂಕು ನೇತೃತ್ವದಲ್ಲಿ ಶನಿವಾರಸಂತೆಯಲ್ಲಿ ವಿಜಯ ದಿವಸ (ಬಾಂಗ್ಲಾ ವಿಮೋಚನಾ ದಿನ) ಪ್ರಯುಕ್ತ ಬೈಕ್ ಮತ್ತು ವಾಹನ ಜಾಥಾ ನಡೆಸಲಾಯಿತು. ಶನಿವಾರಸಂತೆಯ ಗೋಪಾಲಪುರದಿಂದ ಬೈಕ್ ಜಾಥಾ ಹೊರಟು ಬೆಂಬಳೂರು ಮಾರ್ಗವಾಗಿ ಕೊಡ್ಲಿಪೇಟೆ ಮೂಲಕ ಶನಿವಾರಸಂತೆಯ ಕೆ.ಆರ್.ಸಿ. ಸರ್ಕಲ್ ತಲುಪಿತು. ನಂತರ ಕೆ.ಆರ್.ಸಿ ಸರ್ಕಲ್‌ನಲ್ಲಿ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸೈನಿಕ ಸಂಘದ ಅಧ್ಯಕ್ಷ ಮಹೇಶ್ ವಹಿಸಿದ್ದರು. ೧೯೭೧ರ ಯುದ್ಧದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಯೋಧರಾದ ಕಾಜೂರು ಗ್ರಾಮದ ಎಂ.ಎಸ್. ಪೊನ್ನಪ್ಪ, ಎಂ.ಎಸ್. ಕಾಳಪ್ಪ, ಅಪ್ಪಾಜಿ, ಶನಿವಾರಸಂತೆಯ ಕಳಲೇ ಗ್ರಾಮದ ಕೆ.ವಿ. ಮಂಜುನಾಥ್ ಮತ್ತು ಪುಟ್ಟಸ್ವಾಮಿ ಅವರುಗಳನ್ನು ಸನ್ಮಾನಿಸಲಾಯಿತು. ಸೇವಾ ಭಾರತಿ ಜಿಲ್ಲಾ ಅಧ್ಯಕ್ಷ ಟಿ.ಸಿ. ಚಂದ್ರನ್ ಕಾರ್ಯಕ್ರಮದ ಬೌದ್ಧಿಕ್ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಸುಭಾಶ್ ತಿಮ್ಮಯ್ಯ, ಸಹ ಸಂಪರ್ಕ ಪ್ರಮುಖ್ ಎಂ.ಬಿ. ಉಮೇಶ್ ತಾಲೂಕು ಅಧ್ಯಕ್ಷ ಸುನಿಲ್, ಉಪಾಧ್ಯಕ್ಷ ಸಂದೀಪ್, ಪ್ರಧಾನ ಕಾರ್ಯದರ್ಶಿ ಬೋಜೇಗೌಡ , ಕಾರ್ಯದರ್ಶಿ ಲೋಕೇಶ್, ಹಿಂದೂ ಯುವ ವಾಹಿನಿ ಜಿಲ್ಲಾ ಪ್ರಮುಖ್ ಚೇತನ್, ವಲಯ ಪ್ರಮುಖರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.