ಸುಂಟಿಕೊಪ್ಪ, ಡಿ. ೧೮: ಬೋಯಿಕೇರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನಿಗಳಾದ ಮಡಿಕೇರಿ ಡಾ. ಚಿದಾನಂದ್ ಬೆಳ್ಯಪ್ಪ ಹಾಗೂ ಗುತ್ತಿಗೆದಾರÀ ಎಸ್.ಆರ್. ಗಿರೀಶ್ ಶಾಲಾ ೬೨ ಮಕ್ಕಳಿಗೆ ಸುಮಾರು ೨೫ ಸಾವಿರ ಮೌಲ್ಯದ ಸಮ ವಸ್ತçಗಳನ್ನು ನೀಡಿದ್ದು ಇದನ್ನು ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥ್ ಶಿಕ್ಷಣ ಸಂಯೋಜಕರಾದ ಮಾರುತಿ ಅರೇರಾ, ಹಾಗೂ ಹರೀಶ್ ವಿತರಿಸಿದರು. ಶಾಲಾ ಮಕ್ಕಳಿಗೆ ಸಮವಸ್ತç ವಿತರಿಸಿ ಮಾತನಾಡಿದ ಕ್ಷೇತ್ರ ಶಿಕ್ಷ್ಷಣಾಧಿಕಾರಿ ಮಂಜುನಾಥ್ ಸರಕಾರದಿಂದ ಮಕ್ಕಳಿಗೆ ಉಚಿತವಾಗಿ ಸಮವಸ್ತç ನೀಡುವ ಮೊದಲು ದಾನಿಗಳು ಬಡ ಮಕ್ಕಳ ಶಿಕ್ಷÀಣಕ್ಕೆ ಆದ್ಯತೆ ನೀಡುವ ದಿಸೆಯಲ್ಲಿ ಸಮವಸ್ತç ವಿತರಿಸಿರುವುದು ಆಶಾದಾಯಕ ವಿಚಾರವಾಗಿದೆ. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಎಚ್.ಬಿ.ಲೀಲಾ, ಮುಖ್ಯ ಶಿಕ್ಷಕರಾದ ರಾಜು ಎಚ್.ಆರ್. ಶಿಕ್ಷಕರಾದ ಶಿವಕುಮಾರ್, ಪೂರ್ಣೇಶ್ ಪಾರ್ವತಿ, ಸುಲೋಚನಾ, ಶಾಲಿನಿ ಪೋಷಕರು ಹಾಜರಿದ್ದರು.