ಗೋಣಿಕೊಪ್ಪಲು, ಡಿ. ೧೮: ಗೋಣಿಕೊಪ್ಪ ಸರ್ಕಾರಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನಗರದ ಉದ್ಯಮಿ ನಾಮೆರ ದಿಲೀಪ್ ಸೋಮಯ್ಯ ಎರಡು ಸಾವಿರ ಬಿಸ್ಕತ್ ಪ್ಯಾಕ್‌ಗಳನ್ನು ವಿತರಿಸಿದರು. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಬೆಳಗಿನ ಹಾಲಿನೊಂದಿಗೆ ಈ ಬಿಸ್ಕತ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಈ ವೇಳೆ ಮಾತನಾಡಿದ ಉದ್ಯಮಿ ದಿಲೀಪ್, ಹಲವು ಮಕ್ಕಳು ದೂರದ ಗ್ರಾಮದಿಂದ ಬೆಳಗಿನ ಉಪಹಾರವಿಲ್ಲದೆ ಆಗಮಿಸುವುದು ಅರಿತಿದ್ದೇನೆ. ಇದರಿಂದಾಗಿ ಮಕ್ಕಳ ಅನುಕೂಲಕ್ಕಾಗಿ ಬಿಸ್ಕತ್ ನೀಡಲು ನಿರ್ಧರಿಸಿದ್ದೇನೆ ಎಂದರು. ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಪ್ರತಿನಿತ್ಯ ನೀಡುವ ಬಿಸಿ ಹಾಲಿನೊಂದಿಗೆ ಹಲವು ತಿಂಗಳು ಬಿಸ್ಕತ್‌ಗಳನ್ನು ನೀಡಲಾಗುವುದೆಂದು ಶಾಲಾ ಶಿಕ್ಷಕರು ತಿಳಿಸಿದರು. ಈ ವೇಳೆ ಉದ್ಯಮಿಗಳಾದ ನಾಮೇರ ರೇಖಾ ಸೋಮಯ್ಯ, ಶಾಲಾ ಅಧ್ಯಾಪಕರು ಇದ್ದರು.