ಮಡಿಕೇರಿ, ಡಿ. ೧೮: ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹತ್ತನೇ ತರಗತಿಯಲ್ಲಿ ಗ್ರಾಮೀಣ ವಿಭಾಗ ಶೇ.೮೫ ಮೇಲ್ಪಟ್ಟು ಹಾಗೂ ನಗರ ವಿಭಾಗ ಶೇ. ೯೦ ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಪಿ.ಯು.ಸಿ ಮತ್ತು ಪದವಿ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಸಿ.ಇ.ಟಿ ಯಲ್ಲಿ ೧೦೦೦ ಮತ್ತು ಎನ್.ಇ.ಇ.ಟಿ ರಾಷ್ಟçಮಟ್ಟದಲ್ಲಿ ೫೦೦೦ ರ‍್ಯಾಂಕ್ ಒಳಗೆ ಪಡೆದುಕೊಂಡಿರುವ ಗೌಡ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೂಡ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಜ. ೧೫ ರ ಒಳಗೆ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯೊಡನೆ ಅರ್ಜಿಯನ್ನು ಸಂಘದ ಕಚೇರಿಗೆ ತಲುಪಿಸುವಂತೆ ತಿಳಿಸಿದ್ದಾರೆ.

ವೈದ್ಯಕೀಯ, ಇಂಜಿನಿಯರಿAಗ್, ಸ್ನಾತಕೋತ್ತರ ಪದವಿಯಲ್ಲಿ ರ‍್ಯಾಂಕ್ ಪಡೆದ ಮತ್ತು ಕ್ರೀಡೆ, ಕಲೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟç ಮತ್ತು ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವ ಗೌಡ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸನ್ಮಾನಿಸಲಾಗುವುದು. ಆಸಕ್ತರು ಸೂಕ್ತ ದಾಖಲೆಯೊಂದಿಗೆ ಜ. ೧೫ರ ಒಳಗೆ ಸಂಘದ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೇ ಅರೆಭಾಷೆ ದಿನಾಚರಣೆಯ ಅಂಗವಾಗಿ ಕೊಡಗು ಗೌಡ ವಿದ್ಯಾಸಂಘದ ವತಿಯಿಂದ ಗೌಡ ಜನಾಂಗದ ಸಾರ್ವಜನಿಕರಿಗೆ ಅರೆಭಾಷೆ ಕಥಾಸ್ಪರ್ಧೆ ಮತ್ತು ವಿದ್ಯಾರ್ಥಿಗಳಿಗೆ ಅರೆಭಾಷೆ ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕಥೆಗಳು ಮತ್ತು ಕವನಗಳನ್ನು ಡಿ.೩೧ರ ಒಳಗಾಗಿ ಸಂಘದ ಕಚೇರಿಗೆ ತಲುಪಿಸುವಂತೆ ರಮೇಶ್ ಜೋಯಪ್ಪ ಹೇಳಿದ್ದಾರೆ.