ಮಡಿಕೇರಿ, ಡಿ. ೧೮: ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ನ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆ ಮಡಿಕೇರಿ ಕೊಡವ ಸಮಾಜದಲ್ಲಿ ಅಧ್ಯಕ್ಷ ಸಿ.ಕೆ. ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರ ಮಂಡಿಸಲಾಯಿತು. ಸಂಘದ ಅಭಿವೃದ್ಧಿ ಸಂಬAಧ ಸದಸ್ಯರು ಸಲಹೆ ನೀಡಿದರು. ಬ್ಯಾಂಕ್ನ ಉಪಾಧ್ಯಕ್ಷ ಬಿ.ಎಂ. ರಾಜೇಶ್, ನಿರ್ದೇಶಕರು ಗಳಾದ ರಾಜೇಶ್ ಯಲ್ಲಪ್ಪ, ಬಿ.ಕೆ. ಜಗದೀಶ್, ಜಿ.ಎಂ. ಸತೀಶ್ ಪೈ, ಎಸ್.ಸಿ ಸತೀಶ್, ಕಾವೇರಮ್ಮ ಸೋಮಣ್ಣ, ಬಿ.ಪಿ. ಮಾಚಮ್ಮ, ಆರ್. ಗಿರೀಶ್, ಬಿ.ವಿ. ರೋಷನ್, ಕೆ.ಆರ್. ನಾಗೇಶ್, ಸುಮಂತ್ ಪಾಲಾಕ್ಷ, ಎ. ಗೋಪಾಲಕೃಷ್ಣ, ವ್ಯವಸ್ಥಾಪಕ ಪದ್ಮನಾಭ ಕಿಣಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಶೈಕ್ಷಣಿಕವಾಗಿ ಸಾಧನೆ ಮಾಡಿದ ಬ್ಯಾಂಕ್ನ ಸದಸ್ಯರುಗಳ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.