ಮಡಿಕೇರಿ, ಡಿ. ೧೮: ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಹಾಕಿ ತಂಡಕ್ಕೆ ತರಬೇತುದಾರರಾಗಿ ಮೂರ್ನಾಡು ಪದವಿ ಕಾಲೇಜಿನ ದೈಹಿಕ ಶಿಕ್ಷಕ ಕಂಬಿರAಡ ಬೋಪಣ್ಣ ಆಯ್ಕೆಯಾಗಿದ್ದಾರೆ. ಮಡಿಕೇರಿಯ ಸಾಯಿ ಮೈದಾನದಲ್ಲಿ ತರಬೇತಿ ಶಿಬಿರ ತಾ.೩೦ರವರೆಗೆ ನಡೆಯಲಿದೆ ಹಾಗೂ ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾಕೂಟ ಪೊನ್ನಂಪೇಟೆಯ ಆಙಇS ಆಟದ ಮೈದಾನದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.