ಕುಶಾಲನಗರ, ಡಿ.೧೮: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಕಲ್ಯಾಣ ಯೋಜನೆಯಡಿ ಕುಶಾಲನಗರದ ಬೈಚನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಪೋಷಣ ಅಭಿಯಾನ ಅಂಗವಾಗಿ ಸೀಮಂತ ಮತ್ತು ಬಾಣಂತಿಯರಿಗೆ ರಕ್ತಹೀನತೆ ಅರಿವು ಕಾರ್ಯಕ್ರಮ ನಡೆಯಿತು.

ಪ. ಪಂ. ಅಧ್ಯಕ್ಷ ಬಿ.ಜೈವರ್ಧನ್ ಕಾರ್ಯಕ್ರಮ ಉದ್ಘಾಟಿಸಿದರು. ಸದಸ್ಯೆ ರೂಪಾ ಉಮಾಶಂಕರ್ ಸೀಮಂತ ಕಾರ್ಯಕ್ರಮ ನೆರವೇರಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಸಾವಿತ್ರಿ ಪ್ರಾಸ್ತಾವಿಕ ನುಡಿಗಳಾಡಿದರು. ಈ ಸಂದರ್ಭ ಕೂಡಿಗೆಯ ವೈದ್ಯಾಧಿಕಾರಿ ಡಾ.ಜೀವನ್ ರಕ್ತಹೀನತೆ ಬಗ್ಗೆ ಮಾಹಿತಿ ಒದಗಿಸಿದರು. ಈ ಸಂದರ್ಭ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.