ಮಡಿಕೇರಿ, ಡಿ. ೧೮: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಬಾಲ ಕಾರ್ಮಿಕ ನಿರ್ಮೂಲನೆ ಹಾಗೂ ಪುನರ್ ವಸತಿ ಸಮಿತಿ ಸಭೆಯನ್ನು ನಡೆಸಲಾಯಿತು
ತಾಲೂಕಿನಲ್ಲಿರುವ ಗ್ರಾಮ ಹಾಗೂ ಪಟ್ಟಣ ಪಂಚಾಯಿತಿಗಳ ಸ್ವಚ್ಛತಾ ವಾಹನಗಳಲ್ಲಿ ಬಾಲ್ಯಾವಸ್ಧೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ೧೯೮೬ರ ತಿದ್ದುಪಡಿ ೨೦೧೬ರ ಬಗ್ಗೆ ಧ್ವನಿ ವರ್ಧಕಗಳ ಮೂಲಕ ವ್ಯಾಪಕ ಪ್ರಚಾರಕ್ಕಾಗಿ ಕ್ರಮಕೈಗೊಳ್ಳುವ ಸಂಬAಧ ಸಭೆಯಲ್ಲಿ ಚರ್ಚಿಸಲಾಯಿತು.
ತಾಲೂಕಿನಲ್ಲಿರುವ ಗ್ರಾಮ ಪಂಚಾಯಿತಿ/ನಗರಸಭೆ/ಪುರಸಭೆ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಬಾಲ್ಯಾವಸ್ಧೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ೧೯೮೬ರ ತಿದ್ದುಪಡಿ ೨೦೧೬ರ ಬಗ್ಗೆ ಮಾಹಿತಿಯನ್ನು ಒಳಗೊಂಡ ಸ್ಟೀಕರ್‌ಗಳನ್ನು ಹಾಕಿಸುವುದು.
ಬಾಲಕಾರ್ಮಿಕ ಮುಕ್ತ ತಾಲೂಕುವನ್ನಾಗಿಸಲು ಕಾರ್ಮಿಕ ಇಲಾಖೆ ಜೊತೆಗೆ ಸರ್ಕಾರದ ಇತರೆ ಇಲಾಖೆಗಳು ಕೈಜೋಡಿಸುವುದು. ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಕಾಯ್ದೆ ಬಗ್ಗೆ ಅರಿವು ಮೂಡಿಸಲು ನಾಮಫಲಕಗಳನ್ನು ಅನುಷ್ಠಾನಗೊಳಿಸಲು ಸ್ಥಳ ನಿಗದಿಪಡಿಸುವುದು.
ಪ್ರತಿ ತಿಂಗಳು ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಕಾಯ್ದೆ ಅಡಿ ತಪಾಸಣೆ ಕೈಗೊಳ್ಳಲು ಟಾಸ್ಕ್ ಫೋರ್ಸ್ ತಂಡಗಳ ರಚನೆ ಮಾಡುವುದು. ತಾಲೂಕಿನಲ್ಲಿರುವ ಎಲ್ಲಾ ಶಾಲೆಗಳಲ್ಲಿ ಪ್ರಾರ್ಥನೆ ಸಂದರ್ಭ ಪ್ರಾರಂಭದಲ್ಲಿ ಚೈಲ್ಡ್ ಲೈನ್ – ೧೦೯೮ (ಮಕ್ಕಳ ಸಹಾಯವಾಣಿ) ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುವುದು.
ಶಾಲೆಗಳಲ್ಲಿ ಸತತ ಗೈರು ಹಾಜರಾಗುತ್ತಿರುವ ಮಕ್ಕಳನ್ನು ಮರಳಿ ತಪ್ಪದೆ ಶಾಲೆಗೆ ಕರೆತರುವುದು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಮಾಹಿತಿಯನ್ನು ಕಾರ್ಮಿಕ ಇಲಾಖೆಯ ಗಮನಕ್ಕೆ ಒದಗಿಸುವುದು.
ಲೈನ್ ಮನೆಗಳಿಂದ ಶಾಲೆಗಳಿಗೆ ತೆರಳುವ ಮಕ್ಕಳ ಮಾಹಿತಿಯನ್ನು ಸಲ್ಲಿಸಲು ಅಂಗನವಾಡಿ ಕಾರ್ಯಕರ್ತರಿಗೆ ತಿಳಿಸುವುದು. ಪ್ರತಿ ತಿಂಗಳಲ್ಲಿ ಒಂದು ಟಾಸ್ಕ್ ಫೋರ್ಸ್ ತಂಡದಿAದ ಅನಿರೀಕ್ಷಿತ ದಾಳಿಗಳನ್ನು ಹಮ್ಮಿಕೊಳ್ಳುವುದು ಹಾಗೂ ತಂಡದ ಎಲ್ಲಾ ಅಧಿಕಾರಿಗಳು ಭಾಗವಹಿಸುವುದು ಸೇರಿದಂತೆ ಮಕ್ಕಳ ರಕ್ಷಣೆಗೆ ಒತ್ತು ನೀಡುವ ಸಂಬAಧ ವಿವಿಧ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭ ಕುಶಾಲನಗರ ತಹಶೀಲ್ದಾರ ಟಿ.ಎಂ. ಪ್ರಕಾಶ್, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಶ್ರೀರಾಜ್ ಅಹ್ಮದ್, ತಾಲೂಕಿನ ಶಿಶು ಅಭಿವೃದ್ಧಿ ಯೊಜನಾಧಿಕಾರಿ ಅಣ್ಣಪ್ಪ, ಸೋಮವಾರಪೇಟೆ ವೃತ್ತ ಸಿ.ಆರ್.ಪಿ. ಶೇಖರ್, ಕುಶಾಲನಗರ ಪಟ್ಟಣ ಪಂಚಾಯಿತಿಯ ನಂಜುAಡ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಚಂದ್ರಪ್ಪ, ಹಿರಿಯ ಕಾರ್ಮಿಕ ನಿರಿಕ್ಷಕಿ ಲೀನಾ ಹಾಗೂ ಇತರರು ಇದ್ದರು.