ಕೂಡಿಗೆ, ಡಿ. ೧೮: ರಾಷ್ಟಿçÃಯ ಡೈರಿ ಅಭಿವೃದ್ಧಿ ಮಂಡಳಿ ಮತ್ತು ಹಾಸನ ಹಾಲು ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಸೋಮ ವಾರಪೇಟೆ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯ ರೈತರಿಗೆ ೭ ದಿನಗಳ ಜೇನು ಕೃಷಿ ತರಬೇತಿ ಕಾರ್ಯಾಗಾರ ಕೂಡಿಗೆಯ ಸ್ವ ಉದ್ಯೋಗ ತರಬೇತಿ ಕೇಂದ್ರದ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್‌ಕುಮಾರ್ ನೆರವೇರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ರೈತರು ಹೈನುಗಾರಿಕೆಯ ಜೊತೆಯಲ್ಲಿ ಜೇನು ಸಾಕಾಣಿಕೆ ಮಾಡುವ ಮೂಲಕ ಯೋಜನೆ ಯನ್ನು ಹಮ್ಮಿಕೊಂಡರೆ ಹೈನುಗಾರಿಕೆ ಮಾದರಿಯಲ್ಲಿ ಹೆಚ್ಚು ಆದಾಯವನ್ನು ಗಳಿಸಬಹುದು. ಇದರ ಮೂಲಕ ತಮ್ಮ ಆರ್ಥಿಕಮಟ್ಟ ಸುಧಾರಿಸಿ ಕೊಳ್ಳಲು ಸಹಕಾರವಾಗುವುದು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಹಾಸನ ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಕೆ. ಜಯಪ್ರಕಾಶ್ ಮಾತನಾಡಿ, ಹೈನುಗಾರಿಕೆಯಲ್ಲಿ ನೂತನ ತಂತ್ರಜ್ಞಾನದ ಅಡಿಯಲ್ಲಿ ಒಕ್ಕೂಟದ ವತಿಯಿಂದ ಸಿಗುವ ಸೌಲಭ್ಯದ ಜೊತೆಯಲ್ಲಿ ಯೋಜನೆಯ ಸದುಪಯೋಗ ಪಡಿಸಿಕೊಂಡಿರುವ ರೈತರು, ಇದರ ಜೊತೆಯಲ್ಲಿ ಹೆಚ್ಚು ಲಾಭದಾಯಕವಾಗಿರುವ ಜೇನು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದರು.
ಈ ಸಂದರ್ಭ ಸಂಪನ್ಮೂಲ ವ್ಯಕ್ತಿ ಗಳಾದ ಅಪೂರ್ವ ಗುರುಪ್ರಸಾದ್ ಕಾರ್ಯಕ್ರಮ ಸಂಯೋಜಕಿ ರಜಿನಿ ತ್ರೀಪಟಿ, ಹಾಸನ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಎಂ. ವೇಣು ಗೋಪಾಲ್ ವಿಸ್ತರಣಾಧಿಕಾರಿ ಬಿ.ವಿ. ವೀಣಾ ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಮತ್ತು ರೈತರು ಭಾಗವಹಿಸಿದರು. ಸ್ವಾಗತ ಬಿ.ವಿ. ವೀಣಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.