ಚೆಯ್ಯಂಡಾಣೆ, ಡಿ. ೧೭: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆಹಾರ ಸೇವಿಸಲು ಅನುಕೂಲವಾಗಲು ಸ್ಥಳೀಯ ಬೆಳೆಗಾರ ಶ್ಯಾನ್ ಬೋಗರ್ ಸುಮಂತ್ ಅವರು ಅಕ್ಷರ ದಾಸೋಹ ಕಾರ್ಯಕ್ರಮದಡಿ ನೂರರಷ್ಟು ಊಟದ ತಟ್ಟೆಗಳನ್ನು ಹಸ್ತಾಂತ ರಿಸಿದರು. ಈ ಪ್ರಯುಕ್ತ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಶಾಲೆಯ ಪ್ರಬಾರ ಮುಖ್ಯ ಶಿಕ್ಷಕಿ ಶಾಲೆಯ ಪರವಾಗಿ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಸುಮಂತ್ ಅವರು ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ಹೇಳಿ ಶುಭ ಕೋರಿದರು. ಕಾರ್ಯ ಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.
- ಅಶ್ರಫ್, ಚೆಯ್ಯಂಡಾಣೆ