ಮಡಿಕೇರಿ, ಡಿ. ೧೭: ಪುಣ್ಯ ಕ್ಷೇತ್ರವಾದ., ದಕ್ಷಿಣದ ಕಾಶಿ ಎಂದೇ ಖ್ಯಾತಿ ಹೊಂದಿರುವ ಶ್ರೀ ಭಗಂಡೇಶ್ವರನ ಸನ್ನಿಧಿಯಾಗಿರುವ ಭಾಗಮಂಡಲದಲ್ಲಿ ಯಾವದೇ ಅಸಂಪ್ರದಾಯಿಕ ಚಟುವಟಿಕೆಗಳಿಗೆ ಆಸ್ಪದ ನೀಡದೇ ಪಟ್ಟಣವನ್ನು ದೇಗುಲಗಳ ಪಟ್ಟಣವನ್ನಾಗಿ ಘೋಷಣೆ ಮಾಡಬೇಕೆಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಸದ್ದಿಲ್ಲದೇ ಆ ಪರಿಸರದಲ್ಲೊಂದು ರೆಸಾರ್ಟ್ ತಲೆ ಎತ್ತುತ್ತಿದೆ. ರೆಸಾರ್ಟ್ ನಿರ್ಮಾಣಕ್ಕೆ ಅವಕಾಶವಿಲ್ಲದಿದ್ದರೂ ಯಾವದೇ ಪರವಾನಗಿ, ಅನುಮತಿ ಇಲ್ಲದೆ, ಭೂ ಪರಿವರ್ತನೆಯಾಗದ ಗದ್ದೆ ಜಾಗದಲ್ಲಿ ಅನಧಿಕೃತವಾಗಿ ರೆಸಾರ್ಟ್ ನಿರ್ಮಾಣವಾಗುತ್ತಿದೆ.

ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಗಳಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಅವಕಾಶವಿಲ್ಲದಿದರೂ ಈ ಪ್ರದೇಶದಲ್ಲಿ ರೆಸಾರ್ಟ್ ನಿರ್ಮಾಣವಾಗುತ್ತಿರುವದು ಅಚ್ಚರಿಯ ಸಂಗತಿಯೇ ಸರಿ..! ಕಳೆದ ಒಂದು ವರ್ಷದಿಂದ ನಿರ್ಮಾಣ ಕಾಮಗಾರಿ ಆರಂಭಗೊAಡಿದ್ದು, ಇದೀಗ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದು ತಲಪಿದೆ. ಆದರೆ ಕಟ್ಟಡ ನಿರ್ಮಾಣಕ್ಕೆ ಯಾವದೇ ಅನುಮತಿಯೂ ಇಲ್ಲ., ಇತ್ತ ಜಾಗದ ದಾಖಲೆಗಳೂ ಸರಿ ಇಲ್ಲ..!

ಪರಿವರ್ತನೆ ಆಗಿಲ್ಲ..!

ಸ್ಥಳೀಯ ನಿಡ್ಯಮಲೆ ಕುಟುಂಬಸ್ಥರಿಗೆ ಸೇರಿದ ಎರಡು ಎಕರೆ ಗದ್ದೆ ಜಾಗವನ್ನು ಕೇರಳ ಮೂಲದ ಉದ್ಯಮಿಯೋರ್ವರು ಖರೀದಿ ಮಾಡಿದ್ದಾರೆ. ಸುಂದರ ಪರಿಸರದ, ಪ್ರಕೃತಿ ರಮಣೀಯ ಪ್ರದೇಶದಲ್ಲಿ ರೆಸಾರ್ಟ್ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ. ಇದೀಗ ಬಹುತೇಕ ಪೂರ್ಣ ಹಂತಕ್ಕೆ ಬಂದು ತಲಪಿದೆ. ಆದರೆ ಈ ಗದ್ದೆ ಜಾಗ ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾಗಿಲ್ಲ. ಪರಿವರ್ತನೆ ಆಗುವ ಮುನ್ನವೇ ರೆಸಾರ್ಟ್ ತಲೆ ಎತ್ತಿದೆ..!

ಪಂಚಾಯ್ತಿ ಅನುಮತಿಸಿಲ್ಲ..!

ಪರಿವರ್ತನೆ ಆಗದ ಜಾಗದಲ್ಲಿ ಕಟ್ಟಡಗಳ ನಿರ್ಮಾಣ ಹೇಗೆ ಸಾಧ್ಯವಾಯಿತೆಂಬದು ಇಲ್ಲಿ ಪ್ರಶ್ನೆ..? ಕಟ್ಟಡ ನಿರ್ಮಾಣ ಮಾಡಬೇಕಾದರೆ ಸ್ಥಳೀಯ ಆಡಳಿತದ ಅನುಮತಿ ಅಗತ್ಯವಿದೆ. ಈ ಕಟ್ಟಡಕ್ಕೆ ಗ್ರಾಮ ಪಂಚಾಯ್ತಿ ಅನುಮತಿ ನೀಡಿಲ್ಲ, ಆದರೂ ರೆಸಾರ್ಟ್ ಮಾತ್ರ ಭಾರೀ ಜೋರಾಗಿ ಆಗಿದೆ. ಈ ಬಗ್ಗೆ ಹಿಂದಿನ ಗ್ರಾಮ ಪಂಚಾಯ್ತಿ ಆಡಳಿತ ಹಾಗೂ

(ಮೊದಲ ಪುಟದಿಂದ) ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ ಎಂಬದು ಗ್ರಾಮಸ್ಥರ ಪ್ರಶ್ನೆಯಾಗಿದೆ..?

ಪರವಾನಗಿ ಇಲ್ಲ..!

ಹದಿನಾಲ್ಕರಿಂದ ಹದಿನೈದು ಕಾಟೇಜ್‌ಗಳನ್ನು ಹೊಂದಿರುವ ರೆಸಾರ್ಟ್ ನಿರ್ಮಾಣ ಕಾರ್ಯ ಬಹುತೇಕ ಆಗಿದೆ. ರೆಸಾರ್ಟ್ ನಡೆಸಲು ಪಂಚಾಯ್ತಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಪರವಾನಗಿ ಹೊಂದಿರಬೇಕಾಗುತ್ತದೆ. ಆದರೆ ಈ ರೆಸಾರ್ಟ್ಗೆ ಇನ್ನೂ ಪರವಾನಗಿ ದೊರೆತಿಲ್ಲ. ಪರವಾನಗಿಗಾಗಿ ಪಂಚಾಯ್ತಿಗೆ ಅರ್ಜಿ ಸಲ್ಲಿಕೆಯಾಗಿದೆಯಾದರೂ ದಾಖಲೆಗಳು ಸಮರ್ಪಕವಾಗಿಲ್ಲದ ಹಿನ್ನೆಲೆಯಲ್ಲಿ ಈಗಿನ ಆಡಳಿತ ಮಂಡಳಿ ಪರವಾನಗಿ ನೀಡಲು ನಿರಾಕರಿಸಿದೆ. ಆದರೂ ಕೇರಳ ಮುಂತಾದೆಡೆಗಳಿAದ ಈಗಾಗಲೇ ಪ್ರವಾಸಿಗರು ಬಂದು ತಂಗುತ್ತಿರುವದಾಗಿ ತಿಳಿದು ಬಂದಿದೆ..!

ಭಾಗಮAಡಲ ಹಾಗೂ ತಲಕಾವೇರಿ ಕ್ಷೇತ್ರಗಳನ್ನು ಪ್ರವಾಸೀ ತಾಣಗಳ ಭೂಪಟದಿಂದ ಅಳಿಸಿ ಧಾರ್ಮಿಕ ಕ್ಷೇತ್ರಗಳನ್ನಾಗಿ ಪರಿಗಣನೆ ಮಾಡಬೇಕೆಂದು ಜಿಲ್ಲೆಯ ಜನತೆ ಹೋರಾಟ ಮಾಡುತ್ತಿರುವಾಗ ಕ್ಷೇತ್ರದಲ್ಲಿಯೇ ರೆಸಾರ್ಟ್ ಒಂದು ತಲೆ ಎತ್ತಿರುವದು ಅಚ್ಚರಿಯೇ ಸರಿ..!

? ಕುಡೆಕಲ್ ಸಂತೋಷ್