*ಗೋಣಿಕೊಪ್ಪ, ಡಿ. ೧೭: ರೈತಪರ ಹೋರಾಟಕ್ಕಾಗಿ ಸಂಘವು ಕೊಡಗು ಜಿಲ್ಲಾ ಘಟಕದ ಸಮಿತಿಯನ್ನು ಪುನರ್ ರಚನೆಗೆ ಮುಂದಾಗಿದ್ದು, ತಾ. ೨೧ ರಂದು ಅರುವತ್ತೊಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭರಣಿ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಘಟಕದ ನೂತನ ಕಾರ್ಯಕಾರಿಣಿ ಸಮಿತಿಯನ್ನು ರಚಿಸಿ ರೈತಪರ ಹೋರಾಟಕ್ಕೆ ಮುಂದಾಗುವುದಾಗಿ ರಾಜ್ಯ ಮಾಧ್ಯಮ ಕಾರ್ಯದರ್ಶಿ ಮಂಜು ಕಿರಣ್ ತಿಳಿಸಿದರು.

ಗೋಣಿಕೊಪ್ಪದ ಸಿಲ್ವರ್ ಸ್ಕೆöÊ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವ್ಯವಸ್ಥೆಯಲ್ಲಿಯೂ ರೈತರು ಹಲವು ಸಮಸ್ಯೆಯಿಂದ ಬಳಲುತ್ತಿರುವುದು ಕಾಣಬಹುದಾಗಿದೆ. ಕೊಡಗಿನಲ್ಲಿ ಕಳೆದ ಎರಡು ವರ್ಷಗಳಿಂದ ಎದುರಾದ ಅತಿವೃಷ್ಠಿ ರೈತ ಹಾಗೂ ಬೆಳೆಗಾರರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ. ಇನ್ನೊಂದೆಡೆ ವನ್ಯ ಪ್ರಾಣಿಗಳ ಹಾವಳಿಯಿಂದ ಬೆಳೆ ನಷ್ಟ ಉಂಟಾಗುತ್ತಿದ್ದು, ರೈತ ಬದುಕುವುದೇ ಕಷ್ಟಸಾಧ್ಯವೆಂಬ ಸ್ಥಿತಿಗೆ ತಲುಪಿದ್ದಾನೆ. ಕಾರ್ಯಕಾರಿಣಿ ಆಯ್ಕೆ ಸಭೆಯಲ್ಲಿ ಸಾಮೂಹಿಕ ನಾಯಕತ್ವದ ರಾಜ್ಯ ವರಿಷ್ಠ ಚುಕ್ಕಿ ನಂಜುAಡಸ್ವಾಮಿ, ಕೆ.ಟಿ. ಗಂಗಾಧರ, ಪಚ್ಚೆ ನಂಜುAಡಸ್ವಾಮಿ, ರಾಜ್ಯ ಸಂಚಲನಾ ಸಮಿತಿ ಸದಸ್ಯ ವಿದ್ಯಾಸಾಗರ್ ಟಿ.ಆರ್. ಉಪಸ್ಥಿತಿ ಯಲ್ಲಿ ಕೊಡಗು ಜಿಲ್ಲಾ ಸಮಿತಿ ಪುನರ್ ರಚನೆ ಕಾರ್ಯಕರ್ತರ ಸೇರ್ಪಡೆ, ರೈತ ಜಾಗೃತಿ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಚೆಪುö್ಪಡಿರ ಕಾರ್ಯಪ್ಪ, ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಳ್ಳಿಚಂಡ ಧನು, ಜಿಲ್ಲಾ ಸಂಚಾಲಕ ಬಾದುಮಂಡ ಮಹೇಶ್, ಜಿಲ್ಲಾ ಖಜಾಂಚಿ ಚಂಗುಲAಡ ರಾಜಪ್ಪ, ಚೆಪುö್ಪಡಿರ ಮಹೇಶ್, ಕಟ್ಟೇರ ಪ್ರಕಾಶ್ ನಂಜಪ್ಪ, ಹಸಿರು ಸೇನೆ ತಂಡದ ನಾಯಕರಾದ ರಘು, ಮೋಹನ್, ರವಿ ಉಪಸ್ಥಿತರಿದ್ದರು.