ಮಡಿಕೇರಿ, ಡಿ. ೧೭: ಮಡಿಕೇರಿಯ ಶ್ರೀ ವಿನಾಯಕ ಕೊಡವಕೇರಿಯ ವತಿಯಿಂದ ಪುತ್ತರಿ ಊರೊರ್ಮೆ - ಸಂತೋಷಕೂಟ ಕಾರ್ಯಕ್ರಮ ಇತ್ತೀಚೆಗೆ ನಗರದ ಕೊಡವ ಸಮಾಜದಲ್ಲಿ ಜರುಗಿತು. ಕೇರಿಯ ಅಧ್ಯಕ್ಷ ಕುಡುವಂಡ ಬಿ. ಉತ್ತಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಅವರು ಮಾಹಿತಿ ನೀಡಿದರು.

ಈ ಸಂದರ್ಭ ಮಡಿಕೇರಿ ನಗರಸಭೆಗೆ ಸದಸ್ಯರಾಗಿ ಆಯ್ಕೆಗೊಂಡು ಇದೀಗ ಅಧ್ಯಕ್ಷರೂ ಆಗಿರುವ ಕೇರಿಯ ಸದಸ್ಯೆ ನೆರವಂಡ ಅನಿತಾಪೂವಯ್ಯ ಅವರನ್ನು ಸನ್ಮಾನಿಸಲಾಯಿತು. ಅನಿತಾ ಅವರು ಮಾತನಾಡಿ ಸ್ವಚ್ಛ ಆಡಳಿತಕ್ಕೆ ಎಲ್ಲರ ಸಹಕಾರಬೇಕೆಂದರು. ಕೇರಿಯ ನಿರ್ದೇಶಕ ಬಲ್ಯಂಡ ವಿಜು ನಂಜಪ್ಪ ಅನಿತಾ ಅವರ ಪರಿಚಯ ಮಾಡಿದರು. ಕಾರ್ಯದರ್ಶಿ ಪೆಮ್ಮುಡಿಯಂಡ ಎಂ. ಉತ್ತಪ್ಪ ಕ್ರೀಡಾ ವಿಜೇತರ ವಿವರ ನೀಡಿದರು. ಬೊಟ್ಟೋಳಂಡ ಕಾಶಿ ಅಚ್ಚಯ್ಯ ಪ್ರಾರ್ಥಿಸಿದರು. ಮಾಜಿ ಅಧ್ಯಕ್ಷ ಚೊಟ್ಟೆರ ಅಪ್ಪಾಜಿ ಉಪಾಧ್ಯಕ್ಷೆ ಮಂಡೇಟಿರ ಡೈಸಿ ಮಂದಪ್ಪ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.