ಮಡಿಕೇರಿ, ಡಿ. ೧೭: ಮಂಗಳೂರು ವಿಶ್ವವಿದ್ಯಾನಿಲಯದ ಪುರುಷರ ಹಾಕಿ ತಂಡಕ್ಕೆ ಮೂರ್ನಾಡು ಪದವಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅಂತಿಮ ಬಿಕಾಂನ ಬಾರಿಯಂಡ ಬೆಳ್ಳಿಯಪ್ಪ, ಅಂತಿಮ ಬಿಕಾಂನ ಮಂದ ತಂಡ ನಾಚಪ್ಪ, ದ್ವಿತೀಯ ಬಿಕಾಂ ವಲ್ಲಂಡ ಸೋಮಣ್ಣ ಹಾಗೂ ಪ್ರಥಮ ಬಿಕಾಂ ಕೀಕಂಡ ತಿಮ್ಮಯ್ಯ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.