ಮಡಿಕೇರಿ, ಡಿ. ೧೭: ಬಾಂಗ್ಲಾ ವಿಮೋಚನೆ ೫೦ನೇ ವರ್ಷಾಚರಣೆಯ ಅಂಗವಾಗಿ ಮಡಿಕೇರಿಯಲ್ಲಿ ಹಿಂದೂ ಜಾಗರಣ ವೇದಿಕೆ, ಹಿಂದೂ ಯುವ ವಾಹಿನಿ ವತಿಯಿಂದ ಬೈಕ್ ಮತ್ತು ವಾಹನ ಜಾಥಾ ನಡೆಯಿತು.
ನಗರದ ಹಳೆ ಖಾಸಗಿ ಬಸ್ ನಿಲ್ದಾಣದಿಂದ ಹೊರಟ ಜಾಥಾ ಚೌಕಿ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಸುದರ್ಶನ ವೃತ್ತಕ್ಕಾಗಿ ಸಾಗಿ ಜನರಲ್ ತಿಮ್ಮಯ್ಯ ಮ್ಯೂಸಿಯಂ (ಸನ್ನಿಸೈಡ್)ನಲ್ಲಿ ಸಮಾಪ್ತಿಗೊಂಡಿತು. ಕಾರ್ಯಕರ್ತರು ಬೈಕ್ ಹಾಗೂ ವಾಹನಗಳಲ್ಲಿ ರಾಷ್ಟç ಧ್ವಜ ಹಿಡಿದು ಸಾಗಿದರು. ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಕುಕ್ಕೇರ ಜಾಥಾಕ್ಕೆ ಚಾಲನೆ ನೀಡಿದರು. ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿರುವ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಗೈದು, ಮೌನಾಚರಣೆ ಮೂಲಕ ಹುತಾತ್ಮ ಯೋಧರಿಗೆ ಗೌರವ ಸೂಚಿಸಲಾಯಿತು.
ಮೇಜರ್ ನಂದಾ ನಂಜಪ್ಪ (ನಿವೃತ್ತ) ಈ ಸಂದರ್ಭ ಮಾತನಾಡಿ, ಬಾಂಗ್ಲಾ ವಿಮೋಚನೆಯ ಯುದ್ಧದ ಸಂದರ್ಭದ ಕುರಿತು ವಿವರಿಸಿದರು. ಮುಂದುವರೆದ ಅವರು, ಪ್ರತಿ ಭಾರತೀಯನಿಗೆ ದೇಶದ ಮೇಲೆ ಹೆಮ್ಮೆ ಇರಬೇಕು. ಭಾರತ ಯಾವುದೇ ಡಕಾಯಿತಿ ಅಥವಾ ಅನ್ಯಾಯದ ಮೂಲಕ ಯುದ್ಧ ಗೆದ್ದಿಲ್ಲ. ನ್ಯಾಯ ರೀತಿಯ ಹೋರಾಟದಿಂದಲೇ ಇದುವರೆಗೆ ಯುದ್ಧ ಗೆದ್ದಿದ್ದೇವೆ ಆ ಹೆಮ್ಮೆ ಪ್ರತಿಯೊಬ್ಬನಲ್ಲೂ ಇರಬೇಕು ಎಂದರು.
ಹಿAದೂ ಜಾಗರಣ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಡಗದಾಳು ಮಹೇಶ್ ಮಾತನಾಡಿ, ೧೯೭೧ರಲ್ಲಿ ಪಾಕಿಸ್ಥಾನದ ಭಾಗವಾಗಿದ್ದ, ಬಾಂಗ್ಲಾವನ್ನು ವಿಮೋಚನೆ ಮಾಡಲು ಭಾರತ ಕಾರಣವಾಗಿತ್ತು. ಅಂದು ಭಾರತದ ಸೈನಿಕರು ತೋರಿಸಿದ ಪರಾಕ್ರಮ ಸ್ಮರಣೆ ಮಾಡುವುದಕ್ಕಾಗಿ ವಾಹನ ಜಾಥಾ ನಡೆಸುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭ ಪಾರ್ಥಸಾರಥಿ ಮೋಹಂತಿ, ಹಿಂದೂ ಜಾಗರಣ ವೇದಿಕೆ ಪ್ರಚಾರ ಪ್ರಮುಖ್ ಕುಮಾರ್, ಮಡಿಕೇರಿ ನಗರ ಅಧ್ಯಕ್ಷ
(ಮೊದಲ ಪುಟದಿಂದ) ಸಂದೀಪ್, ನಗರ ಪ್ರಧಾನ ಕಾರ್ಯದರ್ಶಿ ಗಣೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ಬೆಳ್ಳಿಯಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಚೇತನ್ ಚೆಟ್ಟಳ್ಳಿ, ಹಿಂದೂ ಯುವ ವಾಹಿನಿ ಜಿಲ್ಲಾ ಸಹ ಸಂಚಾಲಕ್ ಬ್ರಿಜೇಶ್, ಜಿತೇಶ್, ಮಾತೃ ಸುರಕ್ಷಾ ಸಮಿತಿ ಜಿಲ್ಲಾ ಸಂಯೋಜಕ್ ತಿಮ್ಮಯ್ಯ, ಶ್ರೀ ರಾಮ ಸೇನೆಯ ಪ್ರಮುಖ್ ಚೇತನ್, ಮೂಡಾ ಅಧ್ಯಕ್ಷ ರಮೇಶ್ ಹೊಳ್ಳ ಇತರರು ಇದ್ದರು.