ಮಡಿಕೇರಿ, ಡಿ. ೧೭: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೊಡಗು ಜಿಲ್ಲಾ ಲಾರಿ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.

ಕ್ರಷರುಗಳಿಂದ ಮತ್ತು ಕಲ್ಲು ಕೋರೆಗಳಿಂದ ಸಾಮಗ್ರಿ ತುಂಬಿದ ಲಾರಿಗಳಿಗೆ ಅಡೆತಡೆಯಿಲ್ಲದೆ ಪರವಾನಗಿ ಸಿಗುವಂತಿರಬೇಕು. ಜಿಲ್ಲೆಯಲ್ಲಿರುವ ಪರವಾನಗಿ ರಹಿತ ಕ್ರಷರುಗಳನ್ನು ಮತ್ತು ಕೋರೆಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಕಳಪೆ ಮಟ್ಟದ ಎಂಸ್ಯಾAಡ್, ಪಿಸ್ಯಾಂಡ್, ವೆಟ್‌ಮಿಕ್ಸ್ ಹಾಗೂ ಇನ್ನಿತರ ಕಟ್ಟಡ ಸಾಮಗ್ರಿಗಳನ್ನು ಹಲವು ಕ್ರಷರುಗಳಲ್ಲಿ ತಯಾರು ಮಾಡಲಾಗುತ್ತಿದ್ದು ಅಂತವುಗಳನ್ನು ಪರಿಶೀಲಿಸಿ ಅವುಗಳ ವಿರುದ್ಧ ಸಂಬAಧಿಸಿದವರು ಕ್ರಮ ಕೈಗೊಳ್ಳಬೇಕು.

ಕ್ರಷರು ಮತ್ತು ಕೋರೆಗಳಲ್ಲಿ ಬೆಲೆ ಏರಿಕೆ ಮಾಡುವುದಿದ್ದಲ್ಲಿ ಲಾರಿ ಮಾಲೀಕರು ಹಾಗೂ ಚಾಲಕರ ಸಂಘಕ್ಕೆ, ಜಿಲ್ಲಾಡಳಿತ, ಭೂ ಮತ್ತು ಗಣಿ ವಿಜ್ಞಾನ ಇಲಾಖೆಗೆ ಹದಿನೈದು ದಿನ ಮುಂಚಿತವಾಗಿ ಮಾಹಿತಿ ನೀಡಿ ಬೆಲೆ ಏರಿಕೆ ಮಾಡುವಂತಾಗಬೇಕು. ಹೊರ ರಾಜ್ಯದಿಂದ ದಿನಂಪ್ರತಿ ನೂರಾರು ಲಾರಿಗಳು ಪರವಾನಗಿ ಇಲ್ಲದೆ ಕೊಡಗು ಜಿಲ್ಲೆಗೆ ಕಟ್ಟಡ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದ್ದು ಈ ಹಿನ್ನೆಲೆಯಲ್ಲಿ ಗಡಿ ತಪಾಸಣಾ ಕೇಂದ್ರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುದರ್ಶನ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ

(ಮೊದಲ ಪುಟದಿಂದ) ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಬಿ.ಸಿ.ಸತೀಶ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಲಾರಿ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಮಶೂದ್ ಮಹಮ್ಮದ್ ಮೆಟ್ರೋ, ಗೌರವಾಧ್ಯಕ್ಷ ಪಿ.ಟಿ.ರಮೇಶ್, ಉಪಾಧ್ಯಕ್ಷರಾದ ಶೇಖರ್, ಸುಮನ್ ಕುಟ್ಟಪ್ಪ, ಕಾರ್ಯದರ್ಶಿ ಸುಗು ಮತ್ತಿತರರು ಪಾಲ್ಗೊಂಡಿದ್ದರು.