(ಹೆಚ್.ಕೆ. ಜಗದೀಶ್ / ಗೋಣಿಕೊಪ್ಪಲು ವರದಿ)

ಗೋಣಿಕೊಪ್ಪಲು, ಡಿ. ೧೬: ಕುಟ್ಟ ಸನಿಹದ ನಾಣಚ್ಚಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಈ ವ್ಯಾಪ್ತಿಯಲ್ಲಿ ಸಾಕು ಪ್ರಾಣಿಗಳ ಮೇಲೆ ಹುಲಿದಾಳಿ ನಡೆಯುತ್ತಿದ್ದು ಕಂಗಾಲಾಗಿದ್ದ ಆದಿವಾಸಿಗಳು ನಾಗರಹೊಳೆ ಗೇಟ್ ಬಂದ್ ಮಾಡಿ ಪ್ರತಿಭಟನೆಗೂ ಮುಂದಾಗಿದ್ದರು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದ್ದು, ಹುಲಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಅರಣ್ಯದ ಅಂಚಿನಲ್ಲಿ ವಾಸಿಸುವ ಆದಿವಾಸಿಗಳಿಗೆ ಒಂದಲ್ಲಾ ಒಂದು ರೀತಿಯ ಸಮಸ್ಯೆ ಎದುರಾಗುತ್ತಿತ್ತು. ಇದೀಗ ತಮ್ಮ ಜೀವನೋಪಾಯಕ್ಕಾಗಿ ಸಾಕಿದ್ದ ಆಡು, ಕುರಿಗಳು ಹುಲಿಯ ಪಾಲಾಗುತ್ತಿದ್ದರಿಂದ ಕಂಗೆಟ್ಟ ಆದಿವಾಸಿಗಳು ಅನ್ಯ ಮಾರ್ಗವಿಲ್ಲದೇ ನಾಗರಹೊಳೆ ರಾಷ್ಟಿçÃಯ ಉದ್ಯಾನದ ಗೇಟ್ ಅನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಆಡು,ಕುರಿಗಳನ್ನು ತಿನ್ನುತ್ತಿರುವ ಹುಲಿಯನ್ನು ಕೂಡಲೇ ಸೆರೆಹಿಡಿಯುವಂತೆ ಪಟ್ಟು ಹಿಡಿದಿದ್ದರು.

ನಾಗರಹೊಳೆ ರಾಷ್ಟಿçÃಯ ಉದ್ಯಾನದ ಸಮೀಪದ ನಾಣಚ್ಚಿ ಗದ್ದೆ ಹಾಡಿಗೆ ಹೊಂದಿಕೊAಡAತೆ ಕೋದಮೂಲೆ ಎಂಬ ಪೈಸಾರಿ ಜಾಗದಲ್ಲಿ ಹಲವಾರು ಆದಿವಾಸಿಗಳು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಇವರ ಜೀವನ ನಿರ್ವಹಣೆಗೆ ಆಡು, ಕುರಿಗಳನ್ನು ಸಾಕಿಕೊಂಡು ಇದರಲ್ಲಿ ಬರುವ ಆದಾಯದಿಂದ ಜೀವನ ಸಾಗಿಸುತ್ತಿದ್ದಾರೆ. ಬುಧವಾರ ಎಂದಿನAತೆ ಗ್ರಾಮದ ಜಯರಾಂ ಹಾಗೂ ಅನಿತ ಅವರ ಐವತ್ತಕ್ಕೂ ಹೆಚ್ಚಿನ ಆಡುಗಳನ್ನು ಸಮೀಪದ ಗದ್ದೆ ಬಯಲಿನಲ್ಲಿ ಮೇಯಿಸಲು ತೆರಳಿದ್ದರು. ಪೂರ್ವಾಹ್ನ ೧೧.೩೦ ಸುಮಾರಿಗೆ ಸಮೀಪದ ನಾಗರಹೊಳೆ ರಾಷ್ಟಿçÃಯ ಉದ್ಯಾನದಿಂದ ಆಗಮಿಸಿದ ಹುಲಿಯೊಂದು ಈ ಆಡುಗಳ ಮೇಲೆ ಏಕಾ ಏಕಿ ದಾಳಿ ನಡೆಸಿವೆ. ಇದರಿಂದ ಕಂಗಾಲಾದ ಜಯರಾಂನ ಮಗ ಜಯಕುಮಾರ್ ಇನ್ನುಳಿದ ಆಡುಗಳನ್ನು ಅಟ್ಟಿಸಿಕೊಂಡು ಮನೆಗೆ ಬಂದು ಕೊಟ್ಟಿಗೆಯಲ್ಲಿ ಕೂಡಿ ಹಾಕಿ ಭದ್ರ ಪಡಿಸಿದ್ದಾನೆ. ಹುಲಿ ದಾಳಿ ನಡೆದ ವೇಳೆ ಜಯರಾಂನ ೭ ಆಡುಗಳು ಹಾಗೂ ಅನಿತಳ ೨ ಆಡುಗಳು ಬಲಿಯಾಗಿವೆ. ಕೂಡಲೇ ಸುತ್ತಮುತ್ತಲಿನ ಜನತೆಗೆ ಸುದ್ದಿ ಮುಟ್ಟಿಸಿ

ಯಾರು ಕೂಡ ಗದ್ದೆ ಬಯಲಿನಲ್ಲಿ ತೆರಳದಂತೆ ವಿಷÀಯ ತಿಳಿಸಲಾಯಿತು.

(ಮೊದಲ ಪುಟದಿಂದ) ಸುದ್ದಿ ತಿಳಿದ ರೈತ ಸಂಘದ ಕುಟ್ಟ ಗ್ರಾಮದ ಮುಖಂಡರಾದ ಚೆಪ್ಪುಡೀರ ಪಾರ್ಥ ತೆರಳಿ ಆಡುಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬವನ್ನು ವಿಚಾರಿಸಿದರು. ಕೂಡಲೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ರೈತ ಸಂಘದ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಸುದ್ದಿ ಮುಟ್ಟಿಸುವ ಪ್ರಯತ್ನ ನಡೆಸಿದರು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿದ ಸಂದರ್ಭ ಹುಲಿಯೂ ಆಡುಗಳನ್ನು ತಿಂದು ವಿರಮಿಸುತ್ತಿತ್ತು

ಬೆಳಕು ಕಡಿಮೆ ಇದ್ದ ಕಾರಣ ಕಾರ್ಯಾಚರಣೆಯನ್ನು ಗುರುವಾರಕ್ಕೆ ಮುಂದೂಡಿದ್ದರು. ಆದಿವಾಸಿಗಳು ಗುರುವಾರ ಬೆಳಿಗ್ಗೆ ತಮ್ಮ ಪ್ರತಿಭಟನೆ ಆರಂಭಿಸಿದ್ದರು. ಹುಲಿ ಸೆರೆಯಾಗುತ್ತಿದ್ದಂತೆಯೇ ಆದಿವಾಸಿಗಳು ಪ್ರತಿಭಟನೆ ಕೈ ಬಿಟ್ಟು ಪರಿಹಾರ ಒದಗಿಸುವಂತೆ ಆಗ್ರಹಿಸಿದರು. ಅಧಿಕಾರಿಗಳು ಪರಿಹಾರ ನೀಡುವ ಭರವಸೆ ನೀಡಿದರು. ಪ್ರತಿಭಟನೆ ವೇಳೆ ಕುಟ್ಟ ಪೋಲಿಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ,ಗೋಣಿಕೊಪ್ಪ ಇನ್ಸ್ಪೆಕ್ಟರ್ ಜಯರಾಂ, ಸಿಬ್ಬಂದಿಗಳು ಹಾಜರಿದ್ದರು.

ಅರಣ್ಯದಲ್ಲಿ ಬೇಟೆಯಾಡಲು ನಿತ್ರಾಣ ಗೊಂಡಿದ್ದ ಹೆಣ್ಣು ಹುಲಿಯೊಂದು ಅರಣ್ಯದಿಂದ ಹೊರ ಬಂದು ಸಮೀಪದ ಗ್ರಾಮದಲ್ಲಿ ನೆಲೆ ಕಂಡುಕೊAಡಿತ್ತು. ಸುಲಭವಾಗಿ ಸಿಗುವ ಆಡು, ಕುರಿಗಳನ್ನು ಬೇಟೆಯಾಡಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು.

ಆದಿವಾಸಿಗಳು ಪ್ರತಿಭಟನೆಯ ಹಾದಿ ಹಿಡಿಯುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಅಧಿಕಾರಿಗಳು, ಸಾಕಾನೆಗಳ ಸಹಾಯ ದಿಂದ ಹುಲಿಯ ಸೆರೆಗೆ ಕಾರ್ಯಾಚರಣೆ ರೂಪಿಸಿ ಬೆಳಿಗ್ಗೆಯಿಂದಲೇ ಹುಲಿ ಬೇಟೆ ಆರಂಭಿಸಿದರು. ಮಧ್ಯಾಹ್ನ ೩ ಗಂಟೆಯ ಸಮಯದಲ್ಲಿ ಹುಲಿಯನ್ನು ಖೆಡ್ಡಾಕ್ಕೆ ಬೀಳಿಸುವಲ್ಲಿ ಯಶಸ್ವಿಯಾದರು. ಹುಲಿಯ ಸೆರೆಯಿಂದಾಗಿ ನಾಗರಿಕರು ನೆಮ್ಮದಿಯ ಉಸಿರು ಬಿಟ್ಟಾಂತಾಗಿದೆ.

ಹಿರಿಯ ಅಧಿಕಾರಿಗಳಿಗೆ ಒತ್ತಡ ಹೇರಿದ ರೈತ ಸಂಘ ಬಡ ಕಾರ್ಮಿಕರ ಆಡು ಕುರಿಗಳನ್ನು ಹುಲಿಯೂ ಬೇಟೆಯಾಡಿ ಗ್ರಾಮಸ್ಥರು ಬೆಚ್ಚಿ ಬೀಳಿಸುವಂತಹ ಘಟನೆ ನಡೆದ ಸುದ್ದಿ ತಿಳಿದ ರೈತ ಸಂಘದ ಜಿಲ್ಲಾಧÀ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ ಹುಲಿ ಸೆರೆಗೆ ಕೂಡಲೇ ಕ್ರಮ ಕೈಗೊಳ್ಳಲು ಒತ್ತಡ ಹೇರಿದರು. ತಪ್ಪಿದಲ್ಲಿ ಆದಿವಾಸಿಗಳೊಂದಿಗೆ ರೈತ ಸಂಘದ ಸದಸ್ಯರು ಕೂಡ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಲಾಗಿತ್ತು.

ಈ ವೇಳೆ ಹಿರಿಯ ಅಧಿಕಾರಿಗಳು ೨೪ ಗಂಟೆಯ ಒಳಗೆ ಹುಲಿಯನ್ನು ಸೆರೆ ಹಿಡಿಯುವ ಭರವಸೆ ನೀಡಿದ್ದರು. ನಂತರ ಕಾರ್ಯಾಚರಣೆಯಲ್ಲಿ ಹುಲಿ ಸೆರೆ ಹಿಡಿಯಲಾಗಿದೆ. ಆಡು ಕಳೆದುಕೊಂಡ ಕುಟುಂಬಗಳಿಗೆ ಕೂಡಲೇ ಪರಿಹಾರ ಒದಗಿಸುವಂತೆ ರೈತ ಸಂಘ ಒತ್ತಾಯಿಸಿದೆ.

ಮೈಸೂರಿಗೆ ರವಾನೆ

ಕುಟ್ಟ-ಬಾಡಗ ಗ್ರಾಮದ ಒಂಬತ್ತು ಮೇಕೆ ಬಲಿ ಪಡೆದಿದ್ದ ಹುಲಿಯನ್ನು ಇದೀಗ ಮೈಸೂರಿನ ಕೂರ್ಗಳ್ಳಿಯ ಹುಲಿ ಪುನಶ್ಚೇತನಾ ಕೇಂದ್ರಕ್ಕೆ ರವಾನಿಸಲಾಗಿದೆ.

ಕಾರ್ಯಾಚರಣೆ ಹೇಗಿತ್ತು: ನಾಣಚ್ಚಿ ಎಂಬಲ್ಲಿ ಅಪರಾಹ್ನ ೩.೩೦ ಗಂಟೆ ಸುಮಾರಿಗೆ ಅರವಳಿಕೆ ನೀಡಿ ಹುಲಿಯನ್ನು ಹಿಡಿಯಲಾಯಿತು. ಸುಮಾರು ೧೦ ವರ್ಷ ಪ್ರಾಯದ ಹೆಣ್ಣು ಹುಲಿಯಾಗಿದ್ದು, ನಡೆದಾಡಲು ಸ್ವಲ್ಪ ಕಷ್ಟ ಪಡುತ್ತಿತ್ತು. ಕಾಲಿಗೆ ಗಾಯವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು, ಭೀಮ ಆನೆಗಳನ್ನು ಬಳಸಿಕೊಂಡು ಮದ್ಯಾಹ್ನದಿಂದ ಕೂಂಬಿAಗ್ ನಡೆಸಲಾಯಿತು. ೩ ಗಂಟೆ ಸುಮಾರಿಗೆ ಹುಲಿ ಪತ್ತೆಯಾಯಿತು. ಇದರಂತೆ ಅರವಳಿಕೆ ನೀಡಿ ಸೆರೆಹಿಡಿಯಲಾಯಿತು. ಗದ್ದೆಯ ಬದಿಯಲ್ಲಿ ಒಂದು ದಿನದಿಂದ ಹುಲಿ ಕದಲದೆ ಇರುವುದು ಕಂಡುಬAದಿತ್ತು. ಪಾಳು ಬಿಟ್ಟ ಗದ್ದೆಯಾಗಿರುವುದರಿಂದ ಸಾಕಾನೆ ಕಾರ್ಯಾಚರಣೆಗೆ ಹಿನ್ನಡೆ ಉಂಟಾಯಿತು. ಕಾಲು ಇಡಲು ಆನೆಗಳು ಪರದಾಡಿದವು.

ಪಶು ವೈದ್ಯರಾದ ಡಾ. ರಮೇಶ್, ವಾಸಿಂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ನಾಗರಹೊಳೆ ಉದ್ಯಾನವನ ನಿರ್ದೇಶಕ ಮಹೇಶ್‌ಕುಮಾರ್, ಎಸಿಎಫ್ ಗೋಪಾಲ್, ಉತ್ತಪ್ಪ, ಸಿಬ್ಬಂದಿಗಳು ಇದ್ದರು.