ಮಡಿಕೇರಿ, ಡಿ. ೧೭: ಅಮ್ಮತ್ತಿನಾಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಪ್ರಥಮ ಅಧ್ಯಕ್ಷೆಯಾಗಿ ಜಪ್ಪೆಕೋಡಿ ಸುಭಾಷಿಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಬಿ.ಜೆ. ಸಂದೀಪ್ ಚುನಾವಣಾಧಿಕಾರಿಯಾಗಿ ಮಹಿಳಾ ಸಹಕಾರ ಸಂಘಕ್ಕೆ ಅಧ್ಯಕ್ಷರ ಚುನಾವಣೆ ನಡೆಸಿದ ಸಂದರ್ಭ ನಾಮಪತ್ರ ಸಲ್ಲಿಸಿದ್ದ ಏಕೈಕ ಅಭ್ಯರ್ಥಿ ಸುಭಾಷಿಣಿ ಅಧ್ಯಕ್ಷೆಯಾಗಿ ಘೋಷಿಸಲ್ಪಟ್ಟರು.
ಸಂಘದ ಉಪಾಧ್ಯಕ್ಷೆಯಾಗಿ ಜ್ಯೋತಿ ಉತ್ತಯ್ಯ, ನಿರ್ದೇಶಕಿಯರಾಗಿ ಎಂ.ಸಿ. ಬೀನಾ, ಪಿ.ಎಸ್. ಶಾಂತಿ, ಕೆ.ಕೆ. ರೂಪವತಿ, ಪಿ.ಎ. ಸೀತಮ್ಮ, ಕೆ.ಎಂ. ಗಂಗಮ್ಮ, ಪಿ.ಎಸ್. ಶಾಂತ, ಯು.ಎ. ಖುಷಿ, ಪಿ.ಎಸ್. ಶೀಲಾ, ಕೆ.ಎನ್. ಜಯಂತಿ, ಅಕ್ಕಮ್ಮ ಮತ್ತು ಎಂ. ವಿಶಾಲಾಕ್ಷಿ ಆಯ್ಕೆಯಾಗಿದ್ದಾರೆ.
ಕೊಡಗಿನಲ್ಲಿ ಹಾಲು ಉತ್ಪಾದಕರ ಮಹಿಳೆಯರ ಎರಡನೇ ಸಂಘವಾಗಿ ಅಮ್ಮತ್ತಿನಾಡಿನಲ್ಲಿ ಸಹಕಾರ ಸಂಘ ಅಸ್ಥಿತ್ವಕ್ಕೆ ಬಂದಿದ್ದು ದಕ್ಷಿಣ ಕೊಡಗಿನಲ್ಲಿ ಹಾಲು ಉತ್ಪಾದಕರ ಪ್ರಥಮ ಮಹಿಳಾ ಸಹಕಾರ ಸಂಘ ಎಂಬ ಹಿರಿಮೆಗೆ ಪಾತ್ರವಾಗಿದೆ.
ಮಹಿಳೆಯರನ್ನು ಸ್ವಾವಲಂಭಿಗಳಾಗಿಸಿ ಕ್ಷೀರೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುವುದಾಗಿ ನೂತನ ಅಧ್ಯಕ್ಷೆ ಜೆ.ಕೆ.ಸುಭಾಷಿಣಿ ತಿಳಿಸಿದ್ದಾರೆ.