ವೀರಾಜಪೇಟೆ, ಡಿ. ೧೭: ನಂ. ೩೭೮ನೇ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ (ಫೆಡರೇಶನ್) ವೀರಾಜಪೇಟೆ, ಇದರ ೨೦೨೦-೨೧ನೇ ಸಾಲಿನ ೬೯ನೇ ವಾರ್ಷಿಕ ಮಹಾಸಭೆ ಕೊಡಗು ಮಹಿಳ ಸಮಾಜ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ವಾಟೇರಿರ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರು, ಪ್ರಸ್ತುತ ೫೨೧೭ ಸದಸ್ಯರಿರುವ ಸಂಸ್ಥೆಯು ಸರ್ವಾಂಗೀಣ ಪ್ರಗತಿ ಹೊಂದುತ್ತಿದ್ದು, ೨೦೨೦-೨೧ ಸಾಲಿನಲ್ಲಿ ರೂ. ೨೨,೦೬,೭೧೯.೧೩ ನಿವ್ವಳ ಲಾಭಗಳಿಸಿ ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ ‘ಂ' ದೃಢೀಕರಣ ಪಡೆದುಕೊಂಡಿದೆ.

ಸAಘವು ನಿಬಂಧಕರು ಸಹಕಾರಿ ಸಂಘಗಳು ಬೆಂಗಳೂರು ಇವರು ನಿಗದಿಪಡಿಸಿದ ನಮೂನೆಯಲ್ಲಿ ಲೆಕ್ಕಪತ್ರ ಬರೆದಿಟ್ಟಿದು ಸದಸ್ಯತ್ವ ಹಾಗೂ ವ್ಯವಹಾರಗಳು ಉಪನಿಯಮಾವಳಿ ಪ್ರಕಾರ ನಡೆದಿದೆ. ಹಾಗೂ ಸರಕು, ನಗದು, ಆಭರಣಗಳು, ಕಟ್ಟಡ ಇತ್ಯಾದಿಗಳ ಸುರಕ್ಷತೆಗೆ ಅವಶ್ಯವಿರುವ ಸೂಕ್ತ ವಿಮೆ ಮಾಡಿಸಲಾಗಿದೆ ಎಂದರು.

ಸಭೆಯಲ್ಲಿ ೨೦೨೦-೨೧ನೇ ಸಾಲಿನಲ್ಲಿ ಸಂಘದ ೪೩ ಸದಸ್ಯರು ಮೃತಪಟ್ಟಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಸಭೆಯಲ್ಲಿ ವಾರ್ಷಿಕ ಮಹಾಸಭೆಯ ನಡಾವಳಿಕೆ, ಆಡಳಿತ ಮಂಡಳಿ ವರದಿ, ಲೆಕ್ಕ ಪರಿಶೋದನಾ ವರದಿಗಳನ್ನು ಓದಲಾಯಿತು.