ಕುಶಾಲನಗರ, ಡಿ. ೧೭: ಶತಮಾನ ಪೂರೈಸಿರುವ ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕಳೆದ ೨೫ ವರ್ಷ ಗಳಿಂದಲೂ ಸತತ ಲಾಭದಲ್ಲಿ ಮುನ್ನಡೆಯುತ್ತಿದ್ದು, ೨೦೨೦-೨೧ನೇ ಸಾಲಿನಲ್ಲಿ ರೂ. ೧೬೨.೪೩ ಕೋಟಿ ವಾರ್ಷಿಕ ವ್ಯವಹಾರ ನಡೆಸಿ ರೂ. ೧.೦೧ ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ತಿಳಿಸಿದ್ದಾರೆ.

ಸಂಘದ ಕಟ್ಟಡದ ಸಭಾಂಗಣ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಘವು ೩೪೦೬ ಸದಸ್ಯರನ್ನು ಹೊಂದಿದ್ದು, ಅವರಿಂದ ಪಾಲು ಹಣ ರೂ. ೩.೦೯ ಕೋಟಿಗಳನ್ನು ಸಂಗ್ರಹಿಸಿದೆ.

ಸAಘವು ವಿವಿಧ ರೀತಿಯ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಕಳೆದ ಮಾರ್ಚ್ ಅಂತ್ಯಕ್ಕೆ ಒಟ್ಟು ರೂ. ೪೧.೦೬ ಕೋಟಿಗಳಷ್ಟು ಠೇವಣಿಯನ್ನು ಸ್ವೀಕರಿಸಿದ್ದು, ಕಳೆದ ಸಾಲಿಗಿಂತ ಹೆಚ್ಚಿಗೆ ಠೇವಣಿಯನ್ನು ಸಂಗ್ರಹಿಸಿ ಪ್ರಗತಿ ಸಾಧಿಸಿ ಸಂಘದ ದುಡಿಯುವ ಬಂಡವಾಳವನ್ನು ರೂ. ೫೧.೭೬ ಕೋಟಿಗಳಿಗೆ ಹೆಚ್ಚಿಸಿದ್ದೇವೆ ಎಂದರು. ಸಂಘವು ಸ್ವೀಕರಿಸುತ್ತಿರುವ ನಿರಖು ಠೇವಣಿಗಳಿಗೆ ಶೇ. ೭.೫೦ ರಷ್ಟು ಅಧಿಕ ಬಡ್ಡಿಯನ್ನು ನೀಡುತ್ತಿದ್ದು, ಹಿರಿಯ ನಾಗರಿಕರಿಗೆ ಹಾಗೂ ಧಾರ್ಮಿಕ ಸಂಘ-ಸAಸ್ಥೆಗಳಿಗೆ ಶೇ ಅರ್ಧದಷ್ಟು ಹೆಚ್ಚಿನ ಬಡ್ಡಿಯ ದರವನ್ನು ನೀಡುತ್ತಿದ್ದೇವೆ ಎಂದರು.

ಸAಘದಲ್ಲಿ ಕ್ಷೇಮ ನಿಧಿ ರೂ. ೨.೫೮ ಕೋಟಿಗಳಷ್ಟು, ಕಟ್ಟಡ ನಿಧಿ ೧.೮೧ ಕೋಟಿಗಳಷ್ಟು, ಮರಣ ನಿಧಿ ರೂ. ೨೩.೩೬ ಲಕ್ಷಗಳಷ್ಟು, ಮರಣೋತ್ತರ ಸಾಲ ಪರಿಹಾರ ನಿಧಿ ರೂ. ೧೬.೭೯ ಲಕ್ಷಗಳಷ್ಟಿದ್ದು ಇನ್ನಿತರೆ ಎಲ್ಲಾ ನಿಧಿಗಳನ್ನು ಸೇರಿಸಿ ರೂ. ೪.೧೬ ಕೋಟಿಗಳಷ್ಟು ಇತರೆ ನಿಧಿಗಳು ಇರುತ್ತದೆ.

ಸಂಘದ ಸದಸ್ಯರ ಆರೋಗ್ಯ ನಿಧಿಯಿಂದ ಕೆಲವು ಸದಸ್ಯರಿಗೆ ರೂ. ೪೦.೫೦೦ ಗಳಷ್ಟು ಧನ ಸಹಾಯವನ್ನು ಪಾವತಿಸಿದ್ದೇವೆ. ಈ ಸಾಲಿನಲ್ಲಿ ಸದಸ್ಯರಿಗೆ ಶೇ. ೧೦ ಡಿವಿಡೆಂಟ್ ನೀಡಲು ತೀರ್ಮಾನಿಸಿರುತ್ತೇವೆ ಎಂದರು.

ಕೊರೊನಾ ಸೋಂಕು ತಗುಲಿದ ಸಂಘದ ಸದಸ್ಯರಿಗೆ ಮತ್ತು ಕುಟುಂಬ ವರ್ಗದವರಿಗೆ ಹಾಗೂ ಕೊರೊನಾ ಸೋಂಕಿನಿAದ ಮೃತಪಟ್ಟ ಸದಸ್ಯರ ಕುಟುಂಬಕ್ಕೆ ಹಾಗೂ ಸಂಘದ ಪಿಗ್ಮಿ ಸಂಗ್ರಾಹಕರಿಗೆ ತಲಾ ಒಬ್ಬ ಸದಸ್ಯರಿಗೆ ರೂ. ೧೫೦೦ ರಿಂದ ರೂ. ೨೫೦೦ ರವರೆಗಿನ ಒಟ್ಟು ರೂ. ೧,೧೫,೦೦೦ ಮೌಲ್ಯದ ಪೌಷ್ಟಿಕಾಂಶಯುಕ್ತ ಆಹಾರ ಕಿಟ್‌ನ್ನು ವಿತರಿಸಿದ್ದೇವೆ ಎಂದರು.

ಸAಘದಲ್ಲಿ ಕೃಷಿಸಾಲ, ಜಾಮೀನು ಸಾಲ, ಪರಿವರ್ತಿತ ಜಾಮೀನು ಸಾಲ, ಮಧ್ಯಮಾವಧಿ ಸಾಲ, ಪಿಗ್ಮಿ ಮೀರಳತೆ (ಓ.ಡಿ) ಸಾಲ, ವ್ಯಾಪಾರ ಮೀರಳತೆ ಸಾಲ, ವ್ಯಾಪಾರಭಿವೃದ್ಧಿ ಸಾಲ, ಹೈನುಗಾರಿಕೆ ಸಾಲ, ವಾಹನ ಸಾಲ, ಆಭರಣ ಸಾಲ, ವ್ಯಾಪಾರಸಾಲ ಮಧ್ಯಮಾವಧಿ, ನಿವೇಶನ ಮತ್ತು ಕಟ್ಟಡ ಖರೀದಿ ಸಾಲಗಳನ್ನು ನೀಡುತ್ತಿದ್ದು, ಈ ಎಲ್ಲಾ ಸಾಲಗಳ ಮೂಲಕ ಸಂಘದಿAದ ರೂ. ೪೦.೫೩ ಕೋಟಿಗಳಷ್ಟು ಸಾಲವನ್ನು ಈ ಸಾಲಿನಲ್ಲಿ ವಿತರಿಸಲಾಗಿದೆ.

ಸಂಘದಲ್ಲಿ ೬೩ ಸ್ವ ಸಹಾಯ ಗುಂಪುಗಳಿದ್ದು ಇವುಗಳಿಗೆ ಸಂಘದ ಸ್ವಂತ ಬಂಡವಾಳದಿAದ ರೂ. ೪೪.೮೦ ಲಕ್ಷಗಳಷ್ಟು ಸಾಲವನ್ನು ವಿತರಿಸಿರುತ್ತೇವೆ.

ಸಂಘದಲ್ಲಿ ನೂತನ ಸಾಲ ಯೋಜನೆಗಳನ್ನು ಪ್ರಾರಂಭಿಸುತ್ತಿದ್ದು ಸಂಘದ ಕಾರ್ಯವ್ಯಾಪ್ತಿಯಲ್ಲಿರುವ ದುರ್ಬಲ ವರ್ಗದ ಮಹಿಳೆಯರು ಮೈಕ್ರೋಫೈನಾನ್ಸ್ಗಳು ಮತ್ತು ಇನ್ನಿತರೆ ಖಾಸಗಿ ಸಂಸ್ಥೆಗಳಿAದ ಹೆಚ್ಚಿನ ಬಡ್ಡಿಗೆ ಸಾಲಗಳನ್ನು ಪಡೆದು ಶೋಷಣೆಗೆ ಒಳಗಾಗುತ್ತಿದ್ದು, ಇಂತಹ ಶೋಷಣೆಯಿಂದ ಹೊರತಂದು ಆರ್ಥಿಕವಾಗಿ ಸಬಲರನ್ನಾಗಿಸಲು ಕಡಿಮೆ ಬಡ್ಡಿ ದರದಲ್ಲಿ ಸಾಲಗಳನ್ನು ನೀಡಲು ವನಿತಾ ಬಂಧು ಎಂಬ ಜಂಟಿ ಭಾದ್ಯತಾ ಸಾಲ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಒಟ್ಟು ೨೮೩ ಮಹಿಳಾ ಸದಸ್ಯರಿಗೆ ರೂ. ೧.೪೬ ಕೋಟಿಗಳಷ್ಟು ಸಾಲ ವಿತರಿಸಲಾಗಿದೆ. ಸಂಘವು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಬಿ.ಎಂ. ರಸ್ತೆ ಕಚೇರಿ ಕಟ್ಟಡವನ್ನು ಸಹ ಆಧುನಿಕರಣಗೊಳಿಸಿ ವಾರ್ಷಿಕ ರೂ. ೧೨.೬೦೦೦೦ ಗಳಿಗೆ ಬಾಡಿಗೆಗೆ ನೀಡಿದ್ದು ಹಾಗೂ ತ್ಯಾಗರಾಜ ರಸ್ತೆಯಲ್ಲಿರುವ ನೂತನ ಕಟ್ಟಡದ ಮುಂಭಾಗದಲ್ಲಿರುವ ಕಾಫಿ ಕೆಫೆಯನ್ನು ಮಾಸಿಕ ಬಾಡಿಗೆ ರೂ. ೫,೫೦೦ ರಂತೆ ಬಾಡಿಗೆಗೆ ನೀಡಿದ್ದು, ಒಟ್ಟಾಗಿ ವರ್ಷಕ್ಕೆ ರೂ. ೧೩,೨೬೦೦೦ ಸಂಘಕ್ಕೆ ಆದಾಯ ಬರುತ್ತಿದೆ. ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರ ಮಕ್ಕಳ ಪೈಕಿ ೭ನೇ ತರಗತಿ, ೧೦ನೇ ತರಗತಿ, ದ್ವಿತೀಯ ಪಿ.ಯು.ಸಿ., ಅಂತಿಮ ಪದವಿ ಪರೀಕ್ಷೆ, ಡಿಪ್ಲೋಮ ಮತ್ತು ಕೊನೆಯ ಇಂಜಿನಿಯರಿAಗ್ ಪರೀಕ್ಷೆ, ವೈದ್ಯಕೀಯ ಪದವೀದರರಿಗೂ ಉತ್ತಮ ಅಂಕಗಳಿಸಿರುವAತಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನವನ್ನು ಕಳೆದ ೧೦ ವರ್ಷ ಗಳಿಂದಲೂ ನೀಡುತ್ತಿದ್ದೇವೆ.

ಸದಸ್ಯರ ಮಕ್ಕಳು ರಾಷ್ಟçಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಸ್ಪರ್ಧಿಸಿರುವ ಕ್ರೀಡಾಸ್ಪರ್ಧಿಗಳಿಗೆ ಬಹುಮಾನ ವ್ಯವಸ್ಥೆ ಮಾಡುತ್ತಿದ್ದೇವೆ. ಹೊಸದಾಗಿ ವಿದ್ಯಾರ್ಥಿ ವೇತನವನ್ನು ಕಡು ಬಡವರಿಗೆ ಕೊಡುವ ಚಿಂತನೆ ಹೊಂದಲಾಗಿದೆ ಎಂದರು.

ಸAಘದ ಶತಮಾನೋತ್ಸವ: ಸಂಘವು ಕಳೆದ ಜೂನ್ ೨೦೨೧ನೇ ಇಸವಿಗೆ ೧೦೦ ವರ್ಷಗಳನ್ನು ಪೂರೈಸಿ ರುತ್ತದೆ. ಸಂಘದ ಶತಮಾನೋ ತ್ಸವವನ್ನು ವಿಜೃಂಭಣೆಯಿAದ ಆಚರಿಸಲು ಮಹಾಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು, ಶತಮಾನೋತ್ಸವದ ಸವಿ ನೆನಪಿಗಾಗಿ ಸದಸ್ಯರಿಗೆ ಉಪಯೋಗವಾಗುವಂತೆ ಶತಮಾನೋತ್ಸವ ಭವನ ನಿರ್ಮಾಣ ಮಾಡಲು ಚಿಂತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗುಡ್ಡೆಹೊಸೂರು ಪಂಚಾಯಿತಿಯ ಸರ್ವೆ ನಂ. ೨೫/೩ ಹಾಗೂ ೨೫/೪ ಮುಡಾ ಅನು ಮೋದಿತ ವಾಣಿಜ್ಯ ಬಡಾವಣೆಯ ತಲಾ ೪೦ ಸೆಂಟ್‌ಗಳ ೩ ವಾಣಿಜ್ಯ ನಿವೇಶನಗಳ ಒಟ್ಟು ೧೨೦ ಸೆಂಟ್ಸ್ಗಳಷ್ಟು ಸ್ಥಳವನ್ನು ಸಂಘಕ್ಕೆ ಖರೀದಿ ಮಾಡಲಾಗಿದೆ.

ಈ ಜಾಗದಲ್ಲಿ ೬೦೦ ಹಾಗೂ ೩೦೦ ಆಸನ ಸಾಮರ್ಥ್ಯದ ೨ ಸಭಾಭವನಗಳನ್ನು, ಅಡುಗೆ ಕೋಣೆ, ಊಟದ ಹಾಲ್ ಸೇರಿದಂತೆ ಸುಸಜ್ಜಿತ ವಾದ ಭವನ ನಿರ್ಮಿಸಲಾಗುತ್ತದೆ. ಸಂಘದ ಸದಸ್ಯರುಗಳಿಗೆ ರಿಯಾಯಿತಿ ದರದಲ್ಲಿ ಬಾಡಿಗೆಗೆ ನೀಡುವಂತೆ ತೀರ್ಮಾನ ಕೈಗೊಂಡಿರುತ್ತೇವೆ. ಇದೇ ಜಾಗದಲ್ಲಿ ಆರೋಗ್ಯ ತಪಾಸಣಾ ಕೇಂದ್ರ, ಸಂಘದ ಶಾಖಾ ಕಚೇರಿ, ಕಾಫಿ ಕೆಫೆ, ಸೂಪರ್ ಮಾರ್ಕೆಟ್ ತೆರೆಯಲು ಉದ್ದೇಶಿಸಲಾಗಿದೆ ಎಂದರು. ಸಂಘವು ಕೊಡಗಿನ ಸಹಕಾರ ವ್ಯವಸ್ಥೆಯಲ್ಲಿ ತನ್ನದೆ ಛಾಪನ್ನು ಮೂಡಿಸಿ ಉತ್ತಮ ಸೇವೆ ಯನ್ನು ನೀಡುತ್ತಿದ್ದು ಶತಮಾನೋ ತ್ಸವದ ವರ್ಷದಲ್ಲಿ ಇನ್ನು ಹೆಚ್ಚಿನ ಸದಸ್ಯರಿಗೆ ಅನುಕೂಲ ಆಗುವ ಯೋಜನೆಯನ್ನು ರೂಪಿಸಿ ರಾಜ್ಯದಲ್ಲಿಯೇ ಒಂದು ಮಾದರಿ ಸಹಕಾರಿ ಸಂಸ್ಥೆಯಾಗಿ ಬೆಳೆಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯ ವರೆಲ್ಲರೂ ಪ್ರಾಮಾಣಿಕ ಪ್ರಯತ್ನವನ್ನು ಪಡುತ್ತಿದ್ದೇವೆ ಎಂದರು.

ಮಹಾಸಭೆ: ಸಂಘದ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆಯು ತಾ. ೧೯ ರಂದು ಬೆಳಿಗ್ಗೆ ೧೧ ಗಂಟೆಗೆ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಅಧ್ಯಕ್ಷತೆಯಲ್ಲಿ ಗಾಯಿತ್ರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆಯಲಿದೆ. ಸರ್ವ ಸದಸ್ಯರು ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡು ತಮ್ಮ ಸಲಹೆ ಸೂಚನೆಗಳನ್ನು ನೀಡಿ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ವಿ.ಎಸ್. ಆನಂದ್ ಕುಮಾರ್, ನಿರ್ದೇಶಕರಾದ ಬಿ.ಎ. ಅಬ್ದುಲ್ ಖಾದರ್, ಪಿ.ಬಿ. ಯತೀಶ್, ಪಿ. ಕಾರ್ತೀಶನ್, ಹೆಚ್.ಎಂ. ಮಧುಸೂದನ್, ಡಿ.ವಿ. ರಾಜೇಶ್, ಮಧುಕುಮಾರ್, ಕವಿತಾ ಮೋಹನ್, ಕಾರ್ಯನಿರ್ವಹಣಾಧಿಕಾರಿ ಎಸ್.ಬಿ. ಲೋಕೇಶ್ ಇದ್ದರು.