ಶನಿವಾರಸಂತೆ, ಡಿ. ೧೭: ಹಿಂದೂ ಸಾಗರಣಾ ವೇದಿಕೆ ಶನಿವಾರಸಂತೆ ವಲಯದ ವತಿಯಿಂದ ಹಿಂದೂ ಯುವ ವಾಹಿನಿ ನೇತೃತ್ವದಲ್ಲಿ ವಿಜಯ ದಿವಸ (ಬಾಂಗ್ಲಾ ವಿಮೋಚನಾ ದಿನ) ೫೦ನೇ ವರ್ಷಾಚರಣೆ ಪ್ರಯುಕ್ತ ತಾ. ೧೮ ರಂದು (ಇಂದು) ಪಟ್ಟಣದಲ್ಲಿ ಬೈಕ್ ಜಾಥಾ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ ೧೦ ಗಂಟೆಗೆ ಗೋಪಾಲಪುರದಿಂದ ಹೊರಡುವ ಬೈಕ್ ಮತ್ತು ವಾಹನ ಜಾಥಾ ಶನಿವಾರಸಂತೆ ಪಟ್ಟಣದ ಮಧ್ಯೆ ಬೆಂಬಳೂರು ಮಾರ್ಗವಾಗಿ ಕೊಡ್ಲಿಪೇಟೆ ತಲುಪಿ ಅಲ್ಲಿಂದ ಪುನಃ ಮುಖ್ಯ ರಸ್ತೆಯಲ್ಲಿ ಅವರದಾಳು ಮಾರ್ಗವಾಗಿ ಗುಡುಗಳಲೆ ಮೂಲಕ ಕೆ.ಆರ್.ಸಿ. ವೃತ್ತಕ್ಕೆ ತಲುಪಲಿದೆ. ಮಧ್ಯಾಹ್ನ ೧೨ ಗಂಟೆಗೆ ವೃತ್ತದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.