ವೀರಾಜಪೇಟೆ, ಡಿ. ೧೭: ಸಾಗರ ಸಂಗಮ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಬೆಂಗಳೂರಿನ ವಿಶ್ವಕರ್ಮ ಸಮಾಜದಲ್ಲಿ ನಡೆದ sಪ್ರಶಸ್ತಿ ಪ್ರಧಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೀರಾಜಪೇಟೆಯ ಲಕ್ಷ ಬಿ.ಈ. ಅವರಿಗೆ ಕರ್ನಾಟಕ ನಾಟ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ ೩ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಿ.ಈ ಲಕ್ಷ, ಬಿ.ಸಿ. ಈಶ್ವರ್ ಮತ್ತು ಪ್ರಿಯ ಎ.ಜಿ.ರವರ ಪುತ್ರಿ, ನಾಟ್ಯ ಮಯೂರಿ ನೃತ್ಯ ಶಾಲೆಯ ವಿದುಷಿ ಪ್ರೇಮಾಂಜಲಿ ಆಚಾರ್ಯ ಅವರ ಶಿಷ್ಯೆ.