ಮುಳ್ಳೂರು, ಡಿ. ೧೬: ಹನುಮ ಜಯಂತಿ ಪ್ರಯುಕ್ತ ಗುರುವಾರ ಸಮಿಪದ ಶನಿವಾರಸಂತೆ ಶ್ರೀ ರಾಮಮಂದಿರದಲ್ಲಿ ವಿಶೇಷ ಪೂಜೆ, ಹೋಮ ಹವನ ಕಾರ್ಯಕ್ರಮ ನಡೆಯಿತು. ಮುಂಜಾನೆ ೪ ಗಂಟೆಗೆ ಶ್ರೀ ರಾಮ ಮಂದಿರದಲ್ಲಿ ಮೂಲ ವಿಗ್ರಹಗಳಿಗೆ ಪಂಚಾಮೃತ ಅಭಿಷೇಕ, ಪುರುಷ ಸೂಕ್ತ, ಶ್ರೀ ಸೂಕ್ತ ಹಾಗೂ ನಾರಾಯಣ ಸೂಕ್ತ ಅಭಿಷೇಕ ಮುಂತಾದ ಪೂಜಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಬೆಳಿಗ್ಗೆ ೧೧ ಗಂಟೆಗೆ ಶ್ರೀ ರಾಮ ಮಂದಿರದಲ್ಲಿರುವ ದೇವರುಗಳ ವಿಗ್ರಹಗಳಿಗೆ ಹೂವಿನ ಅಲಂಕಾರ ನೆರವೇರಿಸಲಾಯಿತು. ದೇವರುಗಳಿಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು. ಸಂಜೆ ೪ ಗಂಟೆಗೆ ಶ್ರೀರಾಮ ಮಂದಿರದಲ್ಲಿ ಶ್ರೀ ಆಂಜನೇಯ ಮತ್ತು ಇತರ ದೇವರುಗಳಿಗೆ ಸ್ವರ್ಣಾಲಂಕಾರ, ಗಣಪತಿ ಪೂಜೆ, ಪುಣ್ಯಾಹ ವಾಚನ, ಋತ್ವಿಕ ವರ್ಣ ಮತ್ತು ಕಲಶಾರಾಧನೆ ನೆರವೇರಿಸಲಾಯಿತು. ಸಂಜೆ ೫ ಗಂಟೆಯಿAದ ಗಣಪತಿ, ನವಗ್ರಹ, ರಾಮತಾರಕ ಹಾಗೂ ಆಂಜನೇಯ ಹೋಮ ಕಾರ್ಯವನ್ನು ನೆರವೇರಿಸಲಾಯಿತು.