ಸಾಬು ತಿಮ್ಮಯ್ಯ

ಚೆಟ್ಟಳ್ಳಿ, ಡಿ. ೧೬: ರೈತರಿಗೆ ಅನುಕೂಲಕರವಾದ ಮಣ್ಣು ಪರೀಕ್ಷಾ ಕೇಂದ್ರವು ಜಿಲ್ಲೆಯ ಎಲ್ಲರ ಸಹಕಾರ ಸಂಘದಲ್ಲಿ ಪ್ರಾರಂಭಿಸು ವಂತಾಗಬೇಕೆAದು ಹಾಕತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಂಞÂರ ಸಾಬು ತಿಮ್ಮಯ್ಯ ಹೇಳಿದರು. ಮಣ್ಣು ಪರೀಕ್ಷಾ ನೂತನ ತಂತ್ರಜ್ಞಾನವನ್ನು ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಂಘದಲ್ಲಿ ಸಂಘದ ಹಿರಿಯ ಸದಸ್ಯರಿಂದ ಉದ್ಘಾಟನೆಗೊಂಡ ಬಳಿಕ ಮಾತನಾಡಿದ ಅವರು, ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಮೊದಲ ಬಾರಿಗೆ ನೂತನ ತಂತ್ರಜ್ಞಾನದ ಮಣ್ಣು ಪರೀಕ್ಷಾ ಯಂತ್ರವನ್ನು ಅಳವಡಿಸಿದ್ದು ಅದೇರೀತಿ ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸ್ಥಾಪಿಸಿದ್ದು ಸಂಘದ ಎಲ್ಲಾ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.

ಕೃಷಿತAತ್ರ ಸಂಸ್ಥೆಯ ಮಾದೇಟಿರ ತಿಮ್ಮಯ್ಯ ಮಣ್ಣು

ಪರೀಕ್ಷೆಯ ಮಹತ್ವ ಹಾಗೂ ಕೃಷಿತಂತ್ರವನ್ನು ರೈತರೆಲ್ಲ ಸದುಪಯೋಗಪಡಿಸಿಕೊಳ್ಳುವಂತೆ ಸಭೆಯಲ್ಲಿ ತಿಳಿಸಿದರು.

ನಂತರ ಸಂಘದ ಅಧ್ಯಕ್ಷ ಮಂಞÂರ ಸಾಬು ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ನಡೆಯಿತು. ೨೦೨೦-೨೧ನೇ ಸಾಲಿಗೆ ರೂ. ೨೯.೮೧ ಲಕ್ಷ ಲಾಭಗಳಿಸಲಾಗಿದೆ ಎಂಬ ಮಾಹಿತಿ ನೀಡಿದರು. ಸಂಘದ ವಾರ್ಷಿಕ ವರದಿ, ಲೆಕ್ಕಪತ್ರ, ಸಂಘದ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು.