ಸೋಮವಾರಪೇಟೆ, ಡಿ. ೧೬: ಪಟ್ಟಣ ಪಂಚಾಯಿತಿ ವತಿಯಿಂದ ಡೇ-ನಲ್ಮ್ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ ಅಧಿನಿಯಮ ೨೦೧೪ ರಡಿ ತಾ. ೨೦ ರಿಂದ ಅರ್ಹ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಯಲಿದೆ ಎಂದು ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದ್ದಾರೆ.
ಪಟ್ಟಣದ ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ ನೋಂದಾಯಿತ ಆಧಾರ್ ಕಾರ್ಡ್ ಪ್ರತಿ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಇತ್ತೀಚಿನ ೨ ಭಾವಚಿತ್ರ, ವ್ಯಾಪಾರದ ಭಾವಚಿತ್ರ ಹಾಗೂ ಬ್ಯಾಂಕ್‌ಪಾಸ್ ಬುಕ್ ದಾಖಲಾತಿಗಳನ್ನು ಸಮೀಕ್ಷೆದಾರರಿಗೆ ನೀಡಬೇಕು. ಇದರೊಂದಿಗೆ ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಬೇಕೆಂದು ಮುಖ್ಯಾಧಿಕಾರಿ ಮನವಿ ಮಾಡಿದ್ದಾರೆ.