ಮಡಿಕೇರಿ, ಡಿ.೧೬: ಕರ್ನಾಟಕ ಅರೆಭಾಷೆ ಅಕಾಡೆಮಿಯ ಸ್ಥಾಪನೆಯು ಹಿರಿಯರು, ಯುವ ಜನರು ಹಾಗೂ ಅರೆಭಾಷಿಕರ ಹಗಲುರಾತ್ರಿ ದುಡಿಮೆಯ ಪ್ರತಿಫಲವಾಗಿದೆ. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಎಲ್ಲೆಡೆ ಪಸರಿಸಲಿ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟಗಳ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ ಹೇಳಿದರು.

ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅರೆಭಾಷೆ ದಿನಾಚರಣೆ ಪ್ರಯುಕ್ತ ಎನ್.ಎಸ್.ದೇವಿಪ್ರಸಾದ್ ಅವರ ಸಾಕ್ಷö್ಯಚಿತ್ರ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

ಅರೆಭಾಷೆ ಅಕಾಡೆಮಿಯು ೧೦ ವರ್ಷಗಳನ್ನು ಪೂರೈಸಿದ ಐತಿಹಾಸಿಕ ದಿನದ ಬಗ್ಗೆ ನೆನಪು ಮಾಡುವ ಕಾರ್ಯಕ್ರಮವಾಗಿದ್ದು, ಜಿಲ್ಲೆಯ ಮೂಲೆ ಮೂಲೆಯ ಜನರ ಧ್ವನಿಯನ್ನು ಒಗ್ಗೂಡಿಸಿ ಅರೆಭಾಷೆ ಅಕಾಡೆಮಿ ರೂಪಿಸಲಾಗಿದೆ. ಈ ದಿನ ರಾಜ್ಯಾದ್ಯಂತ ಹಲವಾರು ಕಡೆಗಳಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಮಡಿಕೇರಿ, ಡಿ.೧೬: ಕರ್ನಾಟಕ ಅರೆಭಾಷೆ ಅಕಾಡೆಮಿಯ ಸ್ಥಾಪನೆಯು ಹಿರಿಯರು, ಯುವ ಜನರು ಹಾಗೂ ಅರೆಭಾಷಿಕರ ಹಗಲುರಾತ್ರಿ ದುಡಿಮೆಯ ಪ್ರತಿಫಲವಾಗಿದೆ. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಎಲ್ಲೆಡೆ ಪಸರಿಸಲಿ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟಗಳ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ ಹೇಳಿದರು.

ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅರೆಭಾಷೆ ದಿನಾಚರಣೆ ಪ್ರಯುಕ್ತ ಎನ್.ಎಸ್.ದೇವಿಪ್ರಸಾದ್ ಅವರ ಸಾಕ್ಷö್ಯಚಿತ್ರ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

ಅರೆಭಾಷೆ ಅಕಾಡೆಮಿಯು ೧೦ ವರ್ಷಗಳನ್ನು ಪೂರೈಸಿದ ಐತಿಹಾಸಿಕ ದಿನದ ಬಗ್ಗೆ ನೆನಪು ಮಾಡುವ ಕಾರ್ಯಕ್ರಮವಾಗಿದ್ದು, ಜಿಲ್ಲೆಯ ಮೂಲೆ ಮೂಲೆಯ ಜನರ ಧ್ವನಿಯನ್ನು ಒಗ್ಗೂಡಿಸಿ ಅರೆಭಾಷೆ ಅಕಾಡೆಮಿ ರೂಪಿಸಲಾಗಿದೆ. ಈ ದಿನ ರಾಜ್ಯಾದ್ಯಂತ ಹಲವಾರು ಕಡೆಗಳಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ವಿಬಿನ್ನವಾಗಿದ್ದು, ಆ ದಿಸೆಯಲ್ಲಿ ಮುಂದಿನ ತಲೆಮಾರಿಗೆ ಸಂಸ್ಕೃತಿಯನ್ನು ಪಸರಿಸುವ ಕಾರ್ಯ, ಸಂಸ್ಕೃತಿ ಶಿಬಿರ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ, ಮುಂದಿನ ಪೀಳಿಗೆಗೆ ಅರೆಭಾಷೆಯ ಪ್ರಾಚೀನ ಸಂಸ್ಕೃತಿಯನ್ನು ಬೆಳೆಸುವ ಮತ್ತು ಕಲಿಸುವ ಕಾರ್ಯ ಅಕಾಡೆಮಿಯಿಂದ ನಡೆಯಬೇಕಿದೆ. ಅರೆಭಾಷೆ ಭಾಷಾ ವೈವಿದ್ಯತೆ, ಭಾಷಾ ಪ್ರೌಢಿಮೆ ಹೆಚ್ಚಾಗುತ್ತಿದ್ದು, ಬಹು ಮಾದ್ಯಮಗಳಲ್ಲಿಯೂ ಭಾಷೆಯ ಬಳಕೆ ಅಧಿಕವಾಗಿದೆ. ಭಾಷೆಯ ಬಳಕೆಯಿಂದ ಮಾತ್ರ ಭಾಷೆ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು

ಮಡಿಕೇರಿ ನಗರಸಭಾ ಸದಸ್ಯ ಮಹೇಶ್ ಜೈನಿ ಮಾತನಾಡಿ ಅರೆಭಾಷೆ ಹರಿಯುವ ನದಿಯಂತೆ ನಿರಂತರ ಪ್ರಕ್ರಿಯೆ ಹೊಂದಿದೆ. ಉತ್ತಮ ರೀತಿಯ ಜನ ಸ್ಪಂದನೆ ಅಕಾಡೆಮಿಗೆ ದೊರೆಯುತ್ತಿದ್ದು, ಅರೆಭಾಷೆ ಕಾರ್ಯಕ್ರಮಗಳು ಹೆಚ್ಚು ನಡೆಯುವಂತಾಗಲಿ ಎಂದರು.

ಮಾಜಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಅಚಾರ-ವಿಚಾರ, ಸೊಬಾನೆ ಕ್ರೀಡಾ ಮನೋಭಾವ ಮುಂತಾದ ವಿಷಯಗಳಲ್ಲಿ ಅಕಾಡೆಮಿಯು ಹೆಚ್ಚಿನ ಕಾಳಜಿ ತೋರುತ್ತಿರುವುದು ಭಾಷಾ ಬೆಳವಣಿಗೆ ಮೇಲಿನ ಪ್ರೀತಿ ಸೂಚಿಸುತ್ತದೆ. ಜನಪರ ಕಾರ್ಯಕ್ರಮಗಳನ್ನು ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಸದಸ್ಯ ಬೈತಡ್ಕ ಜಾನಕಿ ಬೆಳ್ಯಪ್ಪ, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಆಗೋಳಿಕಜೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕಿ ಕೆ.ಟಿ.ದರ್ಶನ, ಪ್ರಮುಖರಾದ ತುಂತಜೆ ಗಣೇಶ್ ಇತರರು ಇದ್ದರು. ಅಕಾಡೆಮಿ ಸದಸ್ಯ ಕೂಡಕಂಡಿ ದಯಾನಂದ ನಿರೂಪಿಸಿದರು, ಎ.ಟಿ.ಕುಸುಮಾದರ್ ಸ್ವಾಗತಿಸಿದರು, ಪುರುಷೋತ್ತಮ ಕಿರ್ಲಾಯ ವಂದಿಸಿದರು.