ಬಾಡಗ ಸ್ಟೆçöÊಕ್ಸ್ ಚಾಂಪಿಯನ್
ಸಿದ್ದಾಪುರ, ಡಿ. ೧೬: ಮಾಲ್ದಾರೆ ಜನಪರ ಪ್ರೀಮಿಯರ್ ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ಬಾಡಗ ಸ್ಟೆçöÊಕ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮಾಲ್ದಾರೆಯ ಜನಪರ ಕ್ರೀಡಾ ಮತ್ತು ಕಲಾ ಯುವಜನ ಸಂಘದ ವತಿಯಿಂದ ಮಾಲ್ದಾರೆ ಸರಕಾರಿ ಶಾಲೆಯ ಮೈದಾನದಲ್ಲಿ ನಡೆದ ಎರಡನೇ ವರ್ಷದ ಕ್ರಿಕೆಟ್ ಪಂದ್ಯಾಟದ ರೋಚಕ ಫೈನಲ್ ಪಂದ್ಯಾಟದಲ್ಲಿ ಫ್ರೀಡಂ ಬಾಯ್ಸ್ ಹುಂಡಿ ತಂಡವನ್ನು ಮಣಿಸಿದ ಬಾಡಗ ಸ್ಟೆçöÊಕ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಮಾಲ್ದಾರೆ ಗ್ರಾಮದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಹೆಸರು ಮಾಡಿದ ವ್ಯಕ್ತಿಗಳು ಇದ್ದಾರೆ. ಆದರೆ ಗ್ರಾಮದಲ್ಲಿ ಸುಸಜ್ಜಿತ ಆಟದ ಮೈದಾನ ಕೊರತೆ ಇದ್ದು, ಜಿಲ್ಲಾಡಳಿತದ ಗಮನ ಸೆಳೆಯಬೇಕು. ಪ್ರತಿ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ, ಮೈದಾನ ಇರಬೇಕು. ಈ ನಿಟ್ಟಿನಲ್ಲಿ ಜನಪರ ಸಂಘ ಕೆಲಸ ಮಾಡಲು ಸಲಹೆ ನೀಡಿದರು.
ಸಾಮಾಜಿಕ ಹೋರಾಟಗಾರ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ಜನಪರ ಸಂಘ ಶಿಕ್ಷಣ, ಪರಿಸರ ಸಂರಕ್ಷಣೆ ಸೇರಿದಂತೆ ಹತ್ತಾರು ಸಮಾಜಮುಖಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಮಾಲ್ದಾರೆ ಭಾಗದಲ್ಲಿ ಸಾಕಷ್ಟು ಸರಕಾರಿ ಜಾಗಗಳು ಇದ್ದು, ಯುವಕರು ಸಮಿತಿಯನ್ನು ರಚಿಸಿ ಮೈದಾನಕ್ಕಾಗಿ ಹೋರಾಟ ನಡೆಸಬೇಕು. ಗ್ರಾ.ಪಂ. ಕೂಡ ಮೈದಾನ ರಚನೆಗೆ ಸಹಕಾರ ನೀಡಬೇಕೆಂದರು.
ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷ ಶಮೀರ್ ಮಾತನಾಡಿ, ಮಾಲ್ದಾರೆ ಭಾಗದಲ್ಲಿ ಮೈದಾನ ನಿರ್ಮಾಣಕ್ಕಾಗಿ ಗ್ರಾ.ಪಂ. ಸದಸ್ಯರುಗಳು ಜಿಲ್ಲಾಧಿಕಾರಿಗಳಿಗೆ ಮನವಿ ನೀಡುತ್ತೇವೆ. ಗ್ರಾ.ಪಂ. ವ್ಯಾಪ್ತಿಯ ಒತ್ತುವರಿ ಭೂಮಿಯನ್ನು ತೆರವುಗೊಳಿಸಿ ಮೈದಾನ ಹಾಗೂ ನಿವೇಶನ ರಹಿತರಿಗೆ ನೀಡಲು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು. ಇದೇ ವೇಳೆ ಮಾಧ್ಯಮ ಸ್ಪಂದನ ತಂಡದ ಸಂಚಾಲಕ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕ್ರೀಡಾ ಕ್ಷೇತ್ರದ ಸಾಧನೆಗೆ ಹುಂಡಿ ಗ್ರಾಮದ ರಿಯಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಹನೀಫ, ಕಿರಣ್, ನಿಯಾಜ್, ಗ್ರಾ.ಪಂ ಮಾಜಿ ಸದಸ್ಯ ಅಜ್ಜಿನಿಕಂಡ ರಘು ಕರುಂಬಯ್ಯ, ಚೆಂಡೆ ಕಲಾವಿದ ಶಾಜಿ, ಜನಪರ ಸಂಘದ ಅಧ್ಯಕ್ಷ ಆಂಟೋನಿ, ಪ್ರಧಾನ ಕಾರ್ಯದರ್ಶಿ ಬಾವ ಮಾಲ್ದಾರೆ ಸೇರಿದಂತೆ ಇನ್ನಿತರರು ಇದ್ದರು. ಯುವ ಗಾಯಕ ಶಶಿ ಅವರ ಗಾಯನ ಕಾರ್ಯಕ್ರಮ ನಡೆಯಿತು.
ಪಂದ್ಯಾವಳಿಯ ಫೈನಲ್ ಪಂದ್ಯಾಟದ ಪಂದ್ಯ ಪುರುಷೋತ್ತಮ ಸೈಫು, ಸರಣಿ ಶ್ರೇಷ್ಠ ರೀಯಾಜ್ ಇಯಾ, ಉತ್ತಮ ಹೊಡೆತಗಾರ ಲಿಂಗ, ಉತ್ತಮ ಎಸೆತಗಾರ ಶೌಕತ್ ಆಲಿ, ಉತ್ತಮ ಆಟಗಾರ ಸಿನಾನ್, ಉತ್ತಮ ತಂಡ ಫ್ಲೆöÊಯಿಂಗ್ ವಾಡ್ಸ್ ಆಯ್ಕೆಯಾಯಿತು. ಪಂದ್ಯಾವಳಿಯಲ್ಲಿ ೮ ತಂಡಗಳು ಭಾಗವಹಿಸಿತು.