ನಾಪೋಕ್ಲು, ಡಿ. ೧೬: ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೧೨೦೦ ಮಂದಿ ಸದಸ್ಯರಿದ್ದು ೨೦೨೦-೨೧ರ ಸಾಲಿನಲ್ಲಿ ಸಂಘವು ಗಳಿಸಿದ ಲಾಭದಿಂದ ಸದಸ್ಯರಿಗೆ ಶೇ. ೧೨ ಡಿವಿಡೆಂಡ್ ವಿತರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಎಂ. ಅಪ್ಪಚ್ಚು ಹೇಳಿದರು.

ಸಮೀಪದ ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸಂಘದ ಪಾಲು ಬಂಡವಾಳ ರೂ. ೧೪೮.೯೬ ಲಕ್ಷಗಳಾಗಿದ್ದು ೨೦೨೦-೨೧ರ ಸಾಲಿನಲ್ಲಿ ರೂ. ೩೮.೧೬ ಲಕ್ಷ ಲಾಭಗಳಿಸಿದೆ ಎಂದರು. ೬೫೯ ಸದಸ್ಯರಿಗೆ ರೂ. ೧೮೨.೭೩ ಕೋಟಿ ಸಂಘವು ಸಾಲ ವಿತರಿಸಿದೆ. ಸಂಘದಲ್ಲಿ ವಾಣಿಜ್ಯ ಮಳಿಗೆಗಳು ಲಭ್ಯವಿದೆ. ಸದಸ್ಯರು ಪಡೆದ ಸಾಲವನ್ನು ಸಕಾಲದಲ್ಲಿ ಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಈ ಸಂದರ್ಭ ವೇದಿಕೆಯಲ್ಲಿ ಉಪಾಧ್ಯಕ್ಷ ಟಿ.ಬಿ. ಪೊನ್ನಪ್ಪ, ನಿರ್ದೆಶಕ ರಾದ ಎಂ.ಎA. ಚಂಗಪ್ಪ, ಎಂ.ಎನ್. ಕುಶಾಲಪ್ಪ, ಬಿ.ಎ. ತಿಮ್ಮಯ್ಯ, ಎಂ.ಎA. ಅಪ್ಪಚ್ಚ, ಸಿ.ಯು. ಭೀಮಯ್ಯ, ಐ.ಜಿ. ಟಿಂಶ, ಎಂ.ಜಿ. ಸುರೇಶ್, ಕೆ.ಸಿ. ಯಶೋಧ, ಸಿ.ವಿ. ರೀನಾ, ಪಿ.ಎಂ. ಬೆಳ್ಯಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಯು. ಮುತ್ತಮ್ಮ ಹಾಜರಿದ್ದರು.