ಚೆಟ್ಟಳ್ಳಿ, ಡಿ. ೧೬: ಪಾಂಡವರ ಕಾಲದ ಇತಿಹಾಸ ಸಾರುವ ಕೋಟೆಬೆಟ್ಟ ಬೊಟ್ಲಪ್ಪ ಈಶ್ವರ ದೇವಾಲಯದ ವಾರ್ಷಿಕ ಉತ್ಸವವು ಸಾಂಪ್ರದಾಯ ಬದ್ಧವಾಗಿ ನೆರವೇರಿತು.
ವರ್ಷಂಪ್ರತಿ ಕೊಡಗಿನ ಸಂಪ್ರದಾಯದAತೆ ಸಂಕ್ರಮಣದಿAದ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹಬ್ಬದ ಕಟ್ಟು ಬೀಳುತ್ತದೆ. ಉತ್ಸವದ ಮೊದಲ ಸೋಮವಾರ ಪಾಲ್ ಮಂಗಲ ನಡೆದು ಹುತ್ತರಿ ಹಬ್ಬ ಕಳೆದು ಬರುವ ಸಂಕ್ರಮಣ ದಿನ ಉತ್ಸವ ನಡೆಯುತ್ತದೆ. ವಾರ್ಷಿಕ ಉತ್ಸವದ ದಿನ ಬೆಳಿಗ್ಗೆ ನಾಡಿನವರು, ತಕ್ಕ ಮುಖ್ಯಸ್ಥರುಗಳ ಸಮ್ಮುಖದಲ್ಲಿ ಭಂಡಾರ ಮನೆಯಲ್ಲಿ ಸೇರಿ ದೇವ ಭಂಡಾರವನ್ನು ಕನ್ನಿಕಂಡ ಮನೆಯಿಂದ ದೇವಾಲಯಕ್ಕೆ ತರಲಾಯಿತು. ನಾಡಿನಿಂದ ಬರುವ ಎತ್ತು ಪೋರಾಟ ವನ್ನು ದೇವರ ನಡೆಯಲ್ಲಿ ಒಪ್ಪಿಸಿದರು. ಬಿಳಿಕುಪ್ಪಸ ತೊಟ್ಟ ನಾಡಿನವರು ದುಡಿಕೊಟ್ಟ್ ಹಾಡು, ಬೊಳಕಾಟ್, ಪರೆಕಳಿಯನ್ನು ಪ್ರದರ್ಶಿಸಿದರು. ನಾಡಿನವರು ಹರಕೆ ಭಂಡಾರವನ್ನು ದೇವರಿಗೆ ಒಪ್ಪಿಸುವ ಮೂಲಕ ದೇವರ ಪ್ರಸಾದವನ್ನು ಸ್ವೀಕರಿಸಿದರು.
-ಕರುಣ್ ಕಾಳಯ್ಯ