ಮಡಿಕೇರಿ, ಡಿ. ೧೫: ಸೈನಿಕರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದೆ.

ಫೇಸ್‌ಬುಕ್‌ನಲ್ಲಿ ದೇಶ ಕಾಯುವ ಸೈನಿಕರನ್ನು ಐ.ಜಿ. ಚಿಣ್ಣಪ್ಪ ಎಂಬವರು ಅವಮಾನ ಮಾಡಿದ್ದಾರೆ. ಇದು ಹಾಲಿ ಹಾಗೂ ಮಾಜಿ ಸೈನಿಕರಿಗೆ ತುಂಬಾ ನೋವುಂಟು ಮಾಡಿದೆ. ರಕ್ಷಣಾ ಸಿಬ್ಬಂದಿ ಗಡಿ ಕಾಯುತ್ತಿರುವುದರಿಂದ ನಮ್ಮ ಜೀವ ಉಳಿದಿದೆ. ಪ್ರಾಣ ತ್ಯಾಗಕ್ಕೂ ಸಿದ್ಧವಾಗಿರುವ ಸೈನಿಕರ ಮಡಿಕೇರಿ, ಡಿ. ೧೫: ಸೈನಿಕರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದೆ.

ಫೇಸ್‌ಬುಕ್‌ನಲ್ಲಿ ದೇಶ ಕಾಯುವ ಸೈನಿಕರನ್ನು ಐ.ಜಿ. ಚಿಣ್ಣಪ್ಪ ಎಂಬವರು ಅವಮಾನ ಮಾಡಿದ್ದಾರೆ. ಇದು ಹಾಲಿ ಹಾಗೂ ಮಾಜಿ ಸೈನಿಕರಿಗೆ ತುಂಬಾ ನೋವುಂಟು ಮಾಡಿದೆ. ರಕ್ಷಣಾ ಸಿಬ್ಬಂದಿ ಗಡಿ ಕಾಯುತ್ತಿರುವುದರಿಂದ ನಮ್ಮ ಜೀವ ಉಳಿದಿದೆ. ಪ್ರಾಣ ತ್ಯಾಗಕ್ಕೂ ಸಿದ್ಧವಾಗಿರುವ ಸೈನಿಕರ ದೇವಯ್ಯ, ಎಂ.ಪಿ. ಭವಾನಿ ಹಾಜರಿದ್ದರು.

ವೀರಾಜಪೇಟೆ ಮಾಜಿ ಸೈನಿಕರ ಸಂಘ

ವೀರಾಜಪೇಟೆ: ಇತ್ತೀಚೆಗೆ ಅಕಾಲಿಕ ನಿಧನರಾದ ಸೇನೆಯ ಸಿ.ಡಿ.ಎಸ್. ಜನರಲ್ ಬಿಪಿನ್ ರಾವತ್, ರಾಷ್ಟಿçÃಯ ಭದ್ರತಾ ಸಮಿತಿ ಸಲಹೆಗಾರ ಅಜಿತ್ ಧೋವಲ್ ಹಾಗೂ ದೇಶದ ಸೈನಿಕರನ್ನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಕಾಂಗ್ರೆಸ್ ವಕ್ತಾರ ಐಚೇಟ್ಟಿರ ಚಿಣ್ಣಪ್ಪ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ

ವೀರಾಜಪೇಟೆ ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚೇಂದ್ರಿಮಾಡ ಗಣೇಶ್ ನಂಜಪ್ಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ಚಿಣ್ಣಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ಬಿಪಿನ್ ರಾವತ್ ಹಾಗೂ ರಾಷ್ಟಿçÃಯ ಭದ್ರತಾ ಸಮಿತಿಯ ಸಲಹೆಗಾರÀ ಅಜಿತ್ ಧೋವಲ್ ಅವರನ್ನು ನಿಂಧಿಸಿದಲ್ಲದೆ ದೇಶವನ್ನು ಕಾಯುತ್ತಿರುವ ಹೆಮ್ಮೆಯ ಸೈನಿಕರನ್ನು ದೇಶ ಕಾಯುವ ನಾಯಿಗಳೆಂದು ಸಂದೇಶ ಹರಿಬಿಟ್ಟು ನಮ್ಮ ದೇಶದ ಹೆಮ್ಮೆಯ ಸೈನಿಕ ಸಮುದಾಯಕ್ಕೆ ಮಾಡಿರುವ ಅವಹೇಳನವಾಗಿದೆ. ಇದು ಖಂಡನೀಯ. ಇದರಿಂದ ದೇಶದ ಗೌರವಕ್ಕೆ ಮತ್ತು ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ಕೂಡಲೇ ಚಿಣ್ಣಪ್ಪ ಅವರ ಮೇಲೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಇಡೀ ಸೈನಿಕ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಚಿಣ್ಣಪ್ಪ ಸೈನಿಕ ಸಮುದಾಯದ ಕ್ಷಮೆಯಾಚಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.